ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ. ಗಂಡನ ಮನೆಗೆ ಬಂದಾಗಿನಿಂದ ತನ್ನನ್ನು ದರಿದ್ರ, ಶಾಪ, ಇವಳ ಮುಖ ನೋಡಿದರೆ ಅಶುಭ, ದಿನ ಪೂರ್ತಿ ಕೆಟ್ಟದ್ದು ಎಂದು ಹಿಡಿಶಾಪ ಹಾಕುತ್ತಿದ್ದ ಅತ್ತೆಯ ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಹಿಳೆ, ತನ್ನ ಸಾವಿಗೆ ಗಂಡ, ಆತನ ಅಮ್ಮ ಮತ್ತು ಸಹೋದರನೇ ಕಾರಣ ಎಂದು ವಿಡಿಯೋದಲ್ಲಿ ರೆಕಾರ್ಡ್ ಮಾಡಿ, ಬಳಿಕ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ವರದಿಯಾಗಿದೆ.