ಮಹಿಳೆ ಮೇಲೆ ಅತ್ಯಾಚಾರ ಎಸಗಿ ಚಲಿಸುತ್ತಿರುವ ವ್ಯಾನ್ನಿಂದಲೇ ರಸ್ತೆಗೆ ಎಸದೆ ದುರುಳರು; ಸಂತ್ರಸ್ತೆಗೆ ಗಂಭೀರ ಗಾಯ | Woman raped
ಸಾಂದರ್ಭಿಕ ಚಿತ್ರ
Published on:
Copied
Follow Us
ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ ತಡರಾತ್ರಿ ಸಾರಿಗೆಗಾಗಿ ಕಾಯುತ್ತಿದ್ದ 25 ವರ್ಷದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಪಿಕಪ್ ವ್ಯಾನ್ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಚಲಿಸುತ್ತಿರುವ ವ್ಯಾನ್ನಿಂದಲೇ ರಸ್ತೆಗೆ ಎಸೆದು ಹೋಗಿರುವ ಘಟನೆ ಬುಧವಾರ(ಡಿ. 31) ವರದಿಯಾಗಿದೆ.
ಫರಿದಾಬಾದ್ ಪೊಲೀಸ್ ಠಾಣೆಗೆ ಸಂತ್ರಸ್ತೆ ಸಹೋದರಿ ದೂರು ನೀಡಿದ್ದು, ಸೋಮವಾರ ತಡರಾತ್ರಿ ಮಹಿಳೆ ಸಾರಿಗೆಗಾಗಿ ಕಾಯುತ್ತಿದ್ದಾಗ ಇಬ್ಬರು ಆರೋಪಿಗಳು ಲಿಫ್ಟ್ ನೀಡಿದ ನಂತರ ಈ ಘಟನೆ ನಡೆದಿದೆ. ರಸ್ತೆಗೆ ಎಸೆದಿದ್ದರಿಂದ ತಲೆಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಫರಿದಾಬಾದ್ ಪೊಲೀಸ್ ವಕ್ತಾರ ಯಶ್ಪಾಲ್ ಯಾದವ್, ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ತನ್ನ ಹೆತ್ತವರ ಮನೆಯಲ್ಲಿ ತಂಗಿರುವ ಮಹಿಳೆಯೊಬ್ಬರು ಸೋಮವಾರ ಸಂಜೆ ಸೆಕ್ಟರ್ 23ರಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿ ವಾಪಾಸ್ ಮನೆಗೆ ಹಿಂತಿರುವಾಗ ಲಿಫ್ಟ್ ಕೊಡುವ ನೆಪದಲ್ಲಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ.
ಮಹಿಳೆಯನ್ನು ರಾತ್ರಿಯಿಡೀ ಓಡಿಸಿ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಾಜಾ ಚೌಕ್ ಬಳಿ ಕಾರಿನಿಂದ ಹೊರಗೆ ಎಸೆಯಲಾಯಿತು, ಇದರಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮಹಿಳೆ ತನ್ನ ಸಹೋದರಿಗೆ ಕರೆ ಮಾಡಿದ್ದು, ಅವರು ತಕ್ಷಣ ಸ್ಥಳಕ್ಕೆ ತಲುಪಿ ಆಸ್ಪತ್ರೆಗೆ ಸೇರಿಸಿ, ದೂರು ನೀಡಿದ್ದಾರೆ.
ಆರೋಪಿಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದವರಾಗಿದ್ದು, ಪ್ರಸ್ತುತ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದು ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿಗಳ ಗುರುತಿನ ಪರೀಕ್ಷಾ ಪರೇಡ್ ಅನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).