

ಪ್ರಮುಖ ಮುಖ್ಯಾಂಶಗಳು
Woman laid off by Amazon starts chicken farm:
ಅಮೆಜಾನ್, ಒರಾಕಲ್ ನಂತರ ಕಂಪನಿಗಳು ಲೇಆಫ್ ಹೆಸರಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆರುವುಗೊಳಿಸೋದು ಈ ನಡುವೆ ಸಾಕಷ್ಟು ಕಂಡುಬಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದ ನಂತರ ಉದ್ಯೋಗಿಗಳು ಬೇರೆ ಬೇರೆ ಕಂಪನಿಗಳತ್ತ ಮುಖ ಮಾಡುತ್ತಾರೆ. ಎಲ್ಲಿಯೂ ಕೆಲಸ ಸಿಗದಿದ್ದಾಗ ಹೊಸತಾಗಿ ಏನಾದರೂ ಶುರು ಮಾಡಬೇಕು ಎನ್ನುವ ಆಲೋಚನೆಯನ್ನು ಹೊಂದುತ್ತಾರೆ. ಅದರಂತೆ ಅಮೆಜಾನ್ನಿಂದ ಕೆಲಸ ಕಳೆದುಕೊಂಡ ಹೈದರಾಬಾದ್ನ ಮಹಿಳೆಯೊಬ್ಬರು ಮೊಟ್ಟೆ ವ್ಯಾಪಾರಕ್ಕೆ ಕೈ ಹಾಕಿ, ಯಶಸ್ವಿ ಕಂಡುಕೊಂಡ ಬಗ್ಗೆ ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ.