ಮದುವೆಯಾದ ಒಂದು ತಿಂಗಳ ಬಳಿಕ ಅಂದರೆ 2023ರ ಜುಲೈ 4ರಂದು ನವದಂಪತಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಹನಿಮೂನ್‌ಗೆ ತೆರಳಿದ್ದರು. ಈ ಪ್ರವಾಸದ ವೇಳೆ ವಧುವಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆ ಋತುಚಕ್ರ ಪ್ರಾರಂಭವಾಗಿತ್ತು. ಇದರಿಂದ ಕೋಪಗೊಂಡ ಪತಿ ಮೂಡ್ ಹಾಳುಮಾಡಿದೆ ಎಂದು ಆಕ್ರೋಶಗೊಂಡಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕಪಾಳಮೋಕ್ಷ ಮಾಡಿ, ಒದ್ದು, ಗಂಟಲು ಹಿಸುಕಲು ಯತ್ನಿಸಿದ್ದಾನೆ. ಸಂತ್ರಸ್ತೆಯ ಚೀರಾಟ ಕೇಳಿ ಹೋಟೆಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿದ್ದಾರೆ.