ದುರ್ಗಾ ಪೂಜೆಗೆ ಹೋಗ್ತೀನಿ ಎಂದವಳು ನೇರ ಮಸಣಕ್ಕೆ! ಪುತ್ರಿಯ ಹೆಣ ನೋಡಿ ಹೆತ್ತವರು ಹೇಳಿದ್ದು ಶಾಕಿಂಗ್​

ಪ್ರೀತಿಸಿದ ಕಾರಣಕ್ಕೆ ಮನೆಬಿಟ್ಟು ಓಡಿಹೋಗಿ ಮದುವೆಯಾಗಿದ್ದ ಅಂಕಿತಾ ಕುಮಾರಿ ಇದೀಗ ಗಂಡನ ಮನೆಯಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಯುವತಿ ಬಿಹಾರದ ಬೇಗುಸರಾಯ್‌ನಲ್ಲಿ ವರದಿಯಾಗಿದೆ.
woman dead
ದುರ್ಗಾ ಪೂಜೆಗೆ ಹೋಗ್ತೀನಿ ಎಂದವಳು ನೇರ ಮಸಣಕ್ಕೆ! ಪುತ್ರಿಯ ಹೆಣ ನೋಡಿ ಹೆತ್ತವರು ಹೇಳಿದ್ದು ಶಾಕಿಂಗ್​
Published on: 

ಪಾಟ್ನಾ: ಯುವತಿಯೊಬ್ಬಳು ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಸಾವು ನಿಗೂಢ ಎಂದು ಪೊಲೀಸರ ಕಣ್ಣಿಗೆ ಮಣ್ಣರೆಚಲು ಹೋಗಿದ್ದ ಅತ್ತೆ ಮನೆಯವರ ಅಸಲಿ ಬಣ್ಣ ಕೊನೆಗೂ ಬಟಾಬಯಲಾಗಿದೆ.

ಪ್ರೀತಿಸಿದ ಕಾರಣಕ್ಕೆ ಮನೆಬಿಟ್ಟು ಓಡಿಹೋಗಿ ಮದುವೆಯಾಗಿದ್ದ ಅಂಕಿತಾ ಕುಮಾರಿ ಇದೀಗ ಗಂಡನ ಮನೆಯಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಯುವತಿ ಬಿಹಾರದ ಬೇಗುಸರಾಯ್‌ನಲ್ಲಿ ವರದಿಯಾಗಿದೆ. ಮುಸ್ಲಿಂ ಯುವಕನನ್ನು ಪ್ರೀತಿಸಿದ್ದ ಅಂಕಿತಾ, ಹೆತ್ತವರ ವಿರೋಧದ ಬೆನ್ನಲ್ಲೇ ಮನೆ ಬಿಟ್ಟು ಹೋಗಿ ವಿವಾಹವಾಗಿದ್ದರು. ಆದರೀಗ, ದಿಢೀರ್​ ನಿಗೂಢವಾಗಿ ಸಾವಿಗೀಡಾಗಿರುವ ಸುದ್ದಿ ಕೇಳಿ ಪಾಲಕರು ಅಕ್ಷರಶಃ ಆಕ್ರೋಶಗೊಂಡಿದ್ದಾರೆ. ಕಾರಣ, ಮಗಳ ಪತಿ ಮತ್ತು ಆತನ ಮನೆಯವರ ಕೃತ್ಯಕ್ಕೆ.

ಮರುದಿನವೇ ಆಕೆಯ ಸಾವು

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಮತ್ತು ನಾವಿಲ್ಲದ ಸಮಯದಲ್ಲಿ, ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ದುರ್ಗಾಪೂಜೆಗೆಂದು ಮನೆಗೆ ಬರುವುದಾಗಿ ಮಗಳು ಆಸೆ ವ್ಯಕ್ತಪಡಿಸಿದ್ದಳು. ಹೀಗೆಂದ, ಮರುದಿನವೇ ಆಕೆಯ ಸಾವು ಸಂಭವಿಸಿದೆ ಎಂದು ಅಂಕಿತಾ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಗೊಳಿಸಿದ್ದಾರೆ.

ಅಂಕಿತಾ 2021ರಲ್ಲಿ ಮೊಹಮ್ಮದ್ ಅರ್ಸು ಜತೆ ವಿವಾಹವಾದರು. ನಂತರ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಕಿತಾ ಕುಟುಂಬದವರು ಅರ್ಸು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಕೇಸ್​ ಕೋರ್ಟ್​ ಅಂಗಳಕ್ಕೆ ಹೋದಾಗ, ಇಬ್ಬರೂ ಕಾನೂನುಬದ್ಧ ವಯಸ್ಸಿನವರು ಎಂಬ ಕಾರಣಕ್ಕೆ, ಒಟ್ಟಿಗೆ ವಾಸಿಸಲು ನ್ಯಾಯಾಲಯ ಅನುಮತಿ ನೀಡಿತು. ಅಂದಿನಿಂದ ಇಬ್ಬರೂ ಪತಿ-ಪತ್ನಿಯಾಗಿ ಜೀವನ ನಡೆಸುತ್ತಿದ್ದರು.

ಇಸ್ಲಾಂಗೆ ಮತಾಂತರದ ಒತ್ತಡ

ಅಂಕಿತಾ ತಾಯಿ ದ್ರೌಪದಿ ದೇವಿ ಅವರ ಪ್ರಕಾರ, ಮದುವೆಯಾದ ಬಳಿಕ ಧಾರ್ಮಿಕ ಹಿನ್ನೆಲೆಯಿಂದಾಗಿ ದಂಪತಿಗಳ ನಡುವೆ ವಿವಾದಗಳು ಹುಟ್ಟಿಕೊಂಡವು. 2023ರಲ್ಲಿ ಅಂಕಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಪರಿಸ್ಥಿತಿ ತೀರ ಹದಗೆಟ್ಟಿತು. ಅರ್ಸು ಮತ್ತು ಅವನ ಕುಟುಂಬವು ವರದಕ್ಷಿಣೆಯಾಗಿ ಹಣವನ್ನು ಬೇಡಿಕೆಯಿಡಲು ಶುರುಮಾಡಿದರು ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಅಂಕಿತಾ ಮೇಲೆ ಒತ್ತಡ ಹೇರಿದರು ಎಂದು ಆರೋಪಿಸಿದ್ದಾರೆ.

ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ಮತ್ತು ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಕಾರಣ ನನ್ನ ಮಗಳಿಗೆ ಆಕೆಯ ಪತಿ ಮತ್ತು ಕುಟುಂಬದವರು ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದರು. ಈ ಸಮಸ್ಯೆ ಹೆಚ್ಚಾಗುತ್ತಿದ್ದಂತೆ, ಅಂಕಿತಾ ಕುಟುಂಬದವರು ಮಧ್ಯ ಪ್ರವೇಶಿಸಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಯತ್ನಿಸಿದರು. ಎಲ್ಲ ಬಗೆಹರಿಸಿ ಬಂದೆವು ಎನ್ನುವಷ್ಟರಲ್ಲಿ ಆತ ಮತ್ತು ಆತನ ಮನೆಯವರು, ಮತ್ತದೇ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ ಎಂದು ದ್ರೌಪದಿ ಆರೋಪಿಸಿದ್ದಾರೆ.

Also Read
ಆ ಚಿತ್ರದಿಂದಲೇ ಸಾಕಷ್ಟು ಹಾಲಿವುಡ್​ ಆಫರ್​ಗಳು ಬಂದಿವೆ! ಸ್ಟಾರ್​ ನಿರ್ದೇಶಕ ರಾಜಮೌಳಿ ಹೇಳಿಕೆ ವೈರಲ್ | ​SS Rajamouli
woman dead

ಅಕ್ಟೋಬರ್ 19ರಂದು ಮಗಳು ತನ್ನ ಪತಿಗೆ ದಸರಾ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಬಾಡಿ ಬಲ್ಲಿಯಾದ ದುರ್ಗಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಳು. ಇದಕ್ಕೆ ಸಿಟ್ಟಾದ ಅರ್ಸು, ಅಂಕಿತಾಗೆ ಮನಬಂದಂತೆ ಥಳಿಸಿದ್ದಾನೆ. ಅಂದು ರಾತ್ರಿ 11 ಗಂಟೆ ಸುಮಾರಿಗೆ ಅಂಕಿತಾ ನನಗೆ ದೂರವಾಣಿ ಕರೆ ಮಾಡಿ, ಈ ಎಲ್ಲ ವಿಷಯಗಳನ್ನು ಚರ್ಚಿಸಿ ನಾನು ತವರಿಗೆ ಬರುವುದಾಗಿಯೂ ಹೇಳಿದ್ದಳು ಎಂದು ವಿವರಿಸಿದ್ದಾರೆ.

ದ್ರೌಪದಿ ದೇವಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಖಿಲ್ ಕುಮಾರ್ ಖಚಿತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net