ಸ್ನೇಹಿತೆಯ ಕೂದಲನ್ನೇ ಕಟ್ ಮಾಡಿ ವಿಡಿಯೋ ಶೂಟ್ ಮಾಡಿದ ಯುವತಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ! Jealousy Crime

 Jealousy Crime (ಸಾಂದರ್ಭಿಕ ಚಿತ್ರ)
Jealousy Crime (ಸಾಂದರ್ಭಿಕ ಚಿತ್ರ)
Published on
ಮುಂಬೈ: ಪ್ರೀತಿ ಮತ್ತು ಅಸೂಯೆ ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೂ ಇಳಿಸಬಹುದು  ಎಂಬುದಕ್ಕೆ ಮುಂಬೈನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.  ತನ್ನ ಗೆಳೆಯನೊಬ್ಬ ಆಕೆಯ ಸ್ನೇಹಿತೆಯ ಕೂದಲನ್ನು ಹೊಗಳಿದ್ದಕ್ಕಾಗಿ ಅಸೂಯೆಗೊಂಡ (Jealousy Crime) ಯುವತಿಯು ಸ್ನೇಹಿತೆಯ ಕೂದಲನ್ನು ಬಲವಂತವಾಗಿ ಕತ್ತರಿಸಿ ವಿಡಿಯೋ ಮಾಡಿರುವ ವಿಕೃತ ಘಟನೆ ಬೆಳಕಿಗೆ ಬಂದಿದೆ.

ಸ್ನೇಹ ಮತ್ತು ತಪ್ಪು ತಿಳುವಳಿಕೆ

ಪೊಲೀಸರ ಪ್ರಕಾರ, ಆರೋಪಿ ಯುವತಿ ಮತ್ತು ಸಂತ್ರಸ್ತ ಯುವತಿ ಪರಸ್ಪರ ಸ್ನೇಹಿತರಾಗಿದ್ದರು. ಇತ್ತೀಚಿಗೆ ಆರೋಪಿ ಲವರ್​​ ಆಕೆಯ ಸ್ನೇಹಿತೆಯ ಕೂದಲಿನ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನು ಇದು ಅವಳಿಗೆ ತೀವ್ರ ಅಸೂಯೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. 
ಇದೇ ಸೇಡನ್ನು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಆರೋಪಿ ಯುವತಿ, ಸಂತ್ರಸ್ತೆಯನ್ನು ಮಾತನಾಡಿಸುವ ಸಮಯದಲ್ಲಿ ರಾತ್ರಿ 12:30ರ ಸುಮಾರಿಗೆ 3 ಸ್ನೇಹಿತೆಯರೊಂದಿಗೆ ಭೇಟಿ ಅವರ ಮನೆಗೆ ಭೇಟಿ  ನೀಡಿದ್ದಾರೆ. ನಂತರ  ಯುವತಿಯನ್ನು ಕೂಡಿಹಾಕಿ ದೈಹಿಕ ಹಿಂಸೆ ನೀಡಿದ್ದಲ್ಲದೇ ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ ವಿಡಿಯೋ ಮಾಡಿಕೊಂಡಿದ್ದಾರೆ. 
ಈ ಘಟನೆಯನ್ನು ಸಂತ್ರಸ್ತೆ ವಿರೋಧಿಸಿದಾಗ ಕೂದಲನ್ನು ಕತ್ತರಿಸಿದ ವಿಡಿಯೋವನ್ನು ವೈರಲ್ ಮಾಡುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ. ನಂತರ ನೀನು ಏನೂ ಬೇಕಾದರೂ ಮಾಡು ಎಂದು ಹೇಳುತ್ತಾ ಕತ್ತರಿಸಿದ ಕೂದಲಿನ ಒಂದು ಭಾಗವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ. 

ದೂರು ಮತ್ತು ಪೊಲೀಸ್ ಕ್ರಮ

ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತ ಯುವತಿ ತಕ್ಷಣವೇ ವರ್ಸೋವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣದ ಗಾಂಭೀರ್ಯವನ್ನು ಅರಿತ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮುಖ್ಯ ಆರೋಪಿ ಯುವತಿ ಸೇರಿದಂತೆ ಒಟ್ಟು ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಎಫ್‌ಐಆರ್ ದಾಖಲು

ವರ್ಸೋವಾ ಪೊಲೀಸರು ಲೇಬಾ ಮತ್ತು ಆಕೆಯ ಇಬ್ಬರು ಸ್ನೇಹಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್​ 329(3) ಮತ್ತು 329(4) ಕ್ರಿಮಿನಲ್ 351(2) ಮತ್ತು 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net