ಉದ್ಯೋಗಿಗಳಿಗೆ ಬೇಕಿರೋದು ನೆಮ್ಮದಿಯ ರಜೆ 'ಕಾಂಪ್ ಆಫ್' ಅಲ್ಲ; ಟೆಕ್ಕಿ ಪೋಸ್ಟ್​ಗೆ 'ಹೌದೆಂದ' ನೆಟ್ಟಿಗರು..Comp-off Culture

Comp-off Culture
Comp-off Culture
Published on

ಪ್ರಮುಖ ಮುಖ್ಯಾಂಶಗಳು

  • ಕಾಂಪಾಫ್​ ಸಂಸ್ಕೃತಿ ಬಗ್ಗೆ ​ಹೈದರಾಬಾದ್‌ ಯುವತಿಯ ಪೋಸ್ಟ್​ ವೈರಲ್
  • ವಾರದ ಮಧ್ಯೆ ಸಿಗುವ ರಜೆಯಿಂದ ಸಾಮಾಜಿಕ ಜೀವನ ಸಮತೋಲನದಲ್ಲಿರಲು ಸಾಧ್ಯವಿಲ್ಲ
  • ನಿರಂತರ ಕೆಲಸದ ಒತ್ತಡದಿಂದ ಉದ್ಯೋಗಿಗಳು ದೈಹಿಕ ಮತ್ತು ಮಾನಸಿಕವಾಗಿ ಬಳಲುತ್ತಿದ್ದಾರೆ ಎಂದ ಯುವತಿ
​Hyderabad Woman On Comp-off Culture: ಇತ್ತೀಚಿನ ದಿನಗಳಲ್ಲಿ ಕೆಲಸ ಮತ್ತು ಹಣ ಹೆಚ್ಚಾಗುತ್ತಿದ್ದಂತೆ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲದೇ ಸಾಲ ಮಾಡಿಯಾದ್ರು ತುಪ್ಪ ತಿನ್ನಿ ಎನ್ನುವಂತೆ ಮಧ್ಯಮ ವರ್ಗದವರು ಐಷರಾಮಿ ಬದುಕು ಕಟ್ಟಿಕೊಳ್ಳಲು ಲೋನ್​ಗಳನ್ನು ಖರೀದಿ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸದ ಒತ್ತಡ ಮತ್ತು ರಜೆಗಳ ಸುತ್ತ ನಡೆಯುತ್ತಿರುವ ರಾಜಕೀಯದ ಬಗ್ಗೆ ಯುವತಿಯೊಬ್ಬರು ರೆಡ್ಡಿಟ್​​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಇದು ಸೋಶಿಯಲ್​ ,ಮೀಡಿಯಾದಲ್ಲಿ ಹೌದೆಂಬ ಚರ್ಚೆಗೆ ಕಾರಣವಾಗಿದೆ.

ಯುವತಿ ಹೇಳಿದ್ದೇನು?

ವಾರಾಂತ್ಯದಲ್ಲಿ ಕೆಲಸ ಮಾಡಿಸಿ, ಅದಕ್ಕೆ ಪ್ರತಿಯಾಗಿ ನೀಡುವ 'ಕಾಂಪ್-ಆಫ್' ಸಂಸ್ಕೃತಿಯು ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಮಾತನಾಡಿದ್ದು, ಇದಕ್ಕೆ ನೆಟ್ಟಿಗರು ಹೌದು ಇದಂತು ನಿಜ ಎಂದು ಅವರ ವಾದಕ್ಕೆ ತಲೆದೂಗಿದ್ದಾರೆ.
ವಾರಾಂತ್ಯ ಅಂದರೆ ಶನಿವಾರ ಮತ್ತು ಭಾನುವಾರ ಸಿಗುವ ರಜೆಯು ತುಂಬಾನೆ ಮುಖ್ಯವಾಗಿರುತ್ತದೆ. ಏಕೆಂದರೆ, ಅಂದು ನಮ್ಮ ಸ್ನೇಹಿತರನ್ನೋ, ಕುಟುಂಬಸ್ಥರನ್ನೋ ಭೇಟಿಯಾಗಲು ನಿರ್ಧರಿಸಿರುತ್ತೇವೆ. ಆದರೆ, ಕಂಪನಿಗಳು ನಾನಾ ಕಾರಣ ಕೊಟ್ಟು ಆ ದಿನವು ಕೆಲಸ ಮಾಡಿಸಿಕೊಂಡು ಮಂಗಳವಾರವೋ ಅಥವಾ ಬುಧವಾರವೋ ರಜೆ ನೀಡುತ್ತವೆ.

ಮಾನಸಿಕ, ದೈಹಿಕವಾಗಿ ಹಿಂಸೆ

ರಜೆಯ ದಿನ ಕೆಲಸ ಮಾಡಿಸಿಕೊಂಡು ಇನ್ಯಾವುದೋ ದಿನ ರಜೆ ಕೊಟ್ಟರೆ ನಿಜಕ್ಕೂ ಸರಿಯಲ್ಲ. ದಿನವಿಡೀ ಕೆಲಸ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಬಳಲಿರುತ್ತೇವೆ. ಆದರೆ, ಇದಕ್ಕೆ ತಕ್ಕಂತೆ ಪ್ರತಿಫಲ ಸಿಗದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ವಾರದ ಮಧ್ಯದ ರಜೆ ರಜೆ ಎಂದೇ ಅನಿಸೋದಿಲ್ಲ ಎಂದಿದ್ದಾರೆ.

ನೆಟ್ಟಿಗರು ಏನಂತಾರೆ?

ಕೆಲಸದ ಸಂಸ್ಕೃತಿಯು ಉದ್ಯೋಗಿಗಳ ಹಿತವನ್ನು ಮರೆತು ಕೇವಲ ಉತ್ಪಾದಕತೆಗೆ ಮಾತ್ರ ಆದ್ಯತೆ ನೀಡುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಕಾರ್ಪೊರೇಟ್ ಜಗತ್ತಿನಲ್ಲಿ ವೈಯಕ್ತಿಕ ಜೀವನಕ್ಕಿಂತ ಕೆಲಸವೇ ದೊಡ್ಡದು ಎಂಬ ಮನೋಭಾವನೆ ಬದಲಾಗಬೇಕಿದೆ ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net