ಹಿಂದೂಗಳಿಲ್ಲದೆ ಜಗತ್ತು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ: ಮೋಹನ್ ಭಾಗವತ್ | Mohan Bhagwat

Mohan Bhagwat | ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
Mohan Bhagwat | ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
Published on
ಇಂಫಾಲ: ಹಿಂದೂ ಸಮಾಜ ಜಾಗತಿಕ ಧರ್ಮ ರಕ್ಷಕವಾಗಿದ್ದು, ಹಿಂದೂಗಳಿಲ್ಲದೆ ಜಗತ್ತು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ನಮ್ಮ ಧರ್ಮ ಅಮರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪುರದ ಇಂಫಾಲನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಭಾಗವತ್​, ವಿಶ್ವದ ಪ್ರತಿಯೊಂದು ದೇಶವು ಅನೇಕ ರೀತಿಯ ಸನ್ನಿವೇಶಗಳನ್ನು ಕಂಡಿದೆ. ಯುನಾನ್ (ಗ್ರೀಸ್), ಮಿಸ್ರ್ (ಈಜಿಪ್ಟ್) ಮತ್ತು ರೋಮಾ, ಎಲ್ಲಾ ನಾಗರಿಕತೆಗಳು ನಾಶವಾದವು. ನಮ್ಮ ನಾಗರಿಕತೆಯಿಂದ ನಾವು ಇಲ್ಲಿದ್ದೇವೆ ಎಂದರು.
ಭಾರತ ಎಂಬುದು ಅಮರ ನಾಗರಿಕತೆಯ ಹೆಸರು, ನಮ್ಮ ಸಮಾಜದಲ್ಲಿ ನಾವು ಒಂದು ಜಾಲವನ್ನು ಸೃಷ್ಟಿಸಿದ್ದೇವೆ, ಅದರಿಂದಾಗಿ ಹಿಂದೂ ಸಮುದಾಯ ಯಾವಾಗಲೂ ಇರುತ್ತದೆ. ಹಿಂದೂಗಳು ಇಲ್ಲದಿದ್ದರೆ ಜಗತ್ತು ಅಸ್ತಿತ್ವದಲ್ಲಿಲ್ಲ, ಈ ಹಿಂದೆ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಒಂದೇ ಪೂರ್ವಜರ ವಂಶಸ್ಥರಾಗಿರುವುದರಿಂದ ಭಾರತದಲ್ಲಿ ಯಾರೂ ಹಿಂದೂಯೇತರರಲ್ಲ ಎಂದು ಭಾಗವತ್ ಒತ್ತಿ ಹೇಳಿದ್ದಾರೆ.

ಆರ್ಥಿಕ ಸ್ವಾವಲಂಬನೆಗೆ ಕರೆ

ದೇಶವನ್ನು ಬಲಪಡಿಸಲು, ಅದರ ಆರ್ಥಿಕತೆಯು ಸಂಪೂರ್ಣವಾಗಿ ಸ್ವಾವಲಂಬಿಯಾಗಿರಬೇಕು, ಅದೇ ರೀತಿ, ರಾಷ್ಟ್ರವನ್ನು ನಿರ್ಮಿಸಲು ಮಿಲಿಟರಿ ಸಾಮರ್ಥ್ಯ ಮತ್ತು ಜ್ಞಾನ ಸಾಮರ್ಥ್ಯವು ಸಮಾನವಾಗಿ ಮುಖ್ಯ, ನಾವು ಯಾರ ಮೇಲೂ ಅವಲಂಬಿತರಾಗಬಾರದು ಎಂದರು. ನಕ್ಸಲಿಸಂನ ಅವನತಿಯ ಕುರಿತು ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಇದನ್ನು ನಮ್ಮ ಸಮಾಜ ಇನ್ನು ಮುಂದೆ ಸಹಿಸುವುದಿಲ್ಲ ಎಂದು ನಿರ್ಧಾರಕ್ಕೆ ಬಂದ ನಂತರ ಅದು ಕೊನೆಗೊಂಡಿತು ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net