ರಾಜ್ಯದ ಹಿತಾಸಕ್ತಿಗಳಿಗಿಂತ ರಾಜಕೀಯ ಲೇಬಲ್‌ ಮುಖ್ಯವಲ್ಲ... ಟ್ರಂಪ್​ಗೆ ಬೆಂಬಲ ನೀಡಲು ಸಿದ್ಧ ಎಂದಿದ್ದೇಕೆ ರಾಜ್​ ಠಾಕ್ರೆ..?

Raj Thackeray | ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ
Raj Thackeray | ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ
Published on
ಮುಂಬೈ: ರಾಜಕೀಯದಲ್ಲಿ ವ್ಯಕ್ತಿಯೊಬ್ಬ ಹೊಂದುಕೊಂಡು ಹೋಗುತ್ತಾನೆ ಎಂದರೆ ಅದು ಆತನ ಸಿದ್ಧಾಂತದ ರಾಜಿ ಎಂದು ಅರ್ಥವಲ್ಲ, ಮಹಾರಾಷ್ಟ್ರವು ಬಲವಾಗಿ ಉಳಿಯುವುದನ್ನು ಖಚಿತಪಡಿಸಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ಗೂ ಸಹ ಬೆಂಬಲ ನೀಡಲು ಸಿದ್ಧ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಶನಿವಾರ ಎನ್‌ಡಿಟಿವಿಯೊಂದಿಗೆ ಮಾತನಾಡಿದ ರಾಜ್​, ನಮ್ಮ ಉದ್ದೇಶವು ಸ್ಪಷ್ಟ ಮತ್ತು ಶುದ್ಧವಾಗಿದ್ದರೆ ಯಾವುದೇ ವಿಧಾನವನ್ನು ಬಳಸಬಹುದು ಎಂದರು. ಮರಾಠಿ ಜನರ ಅಭಿವೃದ್ದಿ, ಮರಾಠಿ ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆ ಮತ್ತು ಬಲವಾದ ಮಹಾರಾಷ್ಟ್ರ ತಮಗೆ ಅತ್ಯಂತ ಪ್ರಮುಖ ವಿಷಯ ಎಂದಿದ್ದಾರೆ.
ಮರಾಠಿಯನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸುವ ಹಿಂದಿನ ಉದ್ದೇಶವೇನೆಂದು ಪ್ರಶ್ನಿಸಿದ ರಾಜ್ ಠಾಕ್ರೆ, ಕೇಂದ್ರ ಸರ್ಕಾರವು ಅದಕ್ಕೆ ಯಾವುದೇ ರೀತಿಯ ಆರ್ಥಿಕ ಬೆಂಬಲ ನೀಡುತ್ತಿಲ್ಲ, ಸ್ಥಾನಮಾನದ ಹೊರತಾಗಿಯೂ, ಮರಾಠಿಗೆ ಒಂದೇ ಒಂದು ರೂಪಾಯಿಯನ್ನು ನಿಗದಿಪಡಿಸಲಾಗಿಲ್ಲ. ಸಂಸ್ಕೃತಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿದೆ, ನಿರಂತರ ಆರ್ಥಿಕ ಬೆಂಬಲವಿಲ್ಲದೆ ಒಂದು ಭಾಷೆ ಉಳಿಯಲು ಅಥವಾ ಬೆಳೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ತಮ್ಮ ಸಹೋದರರ ನಡುವಿನ ಪುನರ್ಮಿಲನದ ಬಗ್ಗೆ ಮಾತನಾಡಿದ ರಾಜ್​, ಅವರ ಈ ಒಗ್ಗಟ್ಟು ಮರಾಠಿ ಭಾಷೆಯನ್ನು ಮಾತ್ರ ಕೇಂದ್ರೀಕರಿಸಿದ್ದು, ಅದಕ್ಕಿಂತ ಹೆಚ್ಚಿನದನ್ನು ಏನು ಇಲ್ಲ, ಚುನಾವಣಾ ಮೈತ್ರಿಗಳು ಸಂಪೂರ್ಣವಾಗಿ ವಿಭಿನ್ನ ವಿಷಯವಾಗಿರುವುದರಿಂದ ಇದು ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ ಸ್ವಯಂಚಾಲಿತವಾಗಿ ಮೈತ್ರಿಯಾಗಿ ಬದಲಾಗುತ್ತದೆ ಎಂದು ಊಹಿಸುವುದು ತಪ್ಪಾಗುತ್ತದೆ ಎಂದು ಹೇಳಿದರು.
ಟ್ರಂಪ್‌ರನ್ನು ಬೆಂಬಲಿಸುವ ವಿಷಯದ ಬಗ್ಗೆ ಮಾತನಾಡಿದ ಎಂಎನ್​ಎಸ್ ಮುಖ್ಯಸ್ಥರು, ಮಹಾರಾಷ್ಟ್ರವನ್ನು ಬಲಪಡಿಸಲು ಸಹಾಯ ಮಾಡಿದರೆ. ರಾಜಕೀಯ ಲೇಬಲ್‌ಗಳು ರಾಜ್ಯದ ಹಿತಾಸಕ್ತಿಗಳಿಗಿಂತ ಮುಖ್ಯವಲ್ಲ ಎಂದರು. ಚುನಾವಣೆಯಲ್ಲಿ ಸೋತರೂ ಕೂಡ ಮರಾಠಿ ಗುರುತಿನ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವುದಾಗಿ ಎಂಎನ್‌ಎಸ್ ಮುಖ್ಯಸ್ಥರು ಪ್ರತಿಪಾದಿಸಿದ್ದು, ಇದು ರಾಜಕೀಯ ನಿಲುವಲ್ಲ, ಬದಲಾಗಿ ತಮ್ಮ ಚಿಕ್ಕಪ್ಪ ಬಾಳಾಸಾಹೇಬ ಠಾಕ್ರೆ, ತಂದೆ ಮತ್ತು ಅಜ್ಜ ನೀಡಿದ ಮೌಲ್ಯಗಳಿಂದ ರೂಪುಗೊಂಡ ಆಳವಾದ ನಂಬಿಕೆ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net