ದಿನಬಳಕೆ ವಸ್ತುಗಳ ಬೆಲೆ ಶೀಘ್ರವೇ ಏರಿಕೆ? ಯಾವುದೆಲ್ಲ ಹೆಚ್ಚಾಗಬಹುದು? ಹೀಗಿದೆ ವರದಿ

ದಿನನಿತ್ಯ ಬಳಕೆಯ ವಸ್ತುಗಳ ಬೆಲೆ
ದಿನನಿತ್ಯ ಬಳಕೆಯ ವಸ್ತುಗಳ ಬೆಲೆ
Published on

ನವದೆಹಲಿ: ಸೋಪು, ಡಿಟರ್ಜೆಂಟ್, ಬಿಸ್ಕತ್ತು, ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಂಥ ದಿನಬಳಕೆ ವಸ್ತುಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ. ಕಚ್ಚಾ ತೈಲ ಬೆಲೆ ಏರಿಕೆ, ಸಾರಿಗೆ ವೆಚ್ಚ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ದರ ಹೆಚ್ಚಳದಿಂದಾಗಿ ಕಂಪನಿಗಳ ಲಾಭದ ಮೇಲೆ ಒತ್ತಡ ಬಿದ್ದಿದ್ದು, ಇದನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಪ್ರಮುಖ ಕಂಪನಿಗಳ ಮುಖ್ಯಸ್ಥರು ತಿಳಿಸಿದ್ದಾರೆ.

ಈಗಾಗಲೇ ಹಲವು ಕಂಪನಿಗಳು ಶೇ. 3ರಿಂದ 5ರಷ್ಟು ಬೆಲೆ ಹೆಚ್ಚಳ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಸುವ ಮುನ್ಸೂಚನೆ ಸಿಕ್ಕಿದೆ. ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ತಡೆಯಲು ಕಂಪನಿಗಳು ನೇರ ಬೆಲೆ ಏರಿಕೆಯ ಬದಲು, ‘ಗ್ರಾಮೇಜ್’ (ತೂಕ) ಕಡಿಮೆ ಮಾಡುವ ತಂತ್ರವನ್ನೂ ಅನುಸರಿಸುತ್ತಿವೆ. 

ಅಂದರೆ, 5 ರೂ. ಅಥವಾ 10 ಪ್ಯಾಕೆಟ್​ಗಳ ಬೆಲೆ ಅಷ್ಟೇ ಇದ್ದರೂ, ಅದರೊಳಗಿನ ವಸ್ತುವಿನ ಪ್ರಮಾಣ ಕಡಿಮೆಯಾಗಲಿದೆ. ಡಾಬರ್ ಇಂಡಿಯಾ ಈಗಾಗಲೇ ಶೇ. 4ರಷ್ಟು ಬೆಲೆ ಹೆಚ್ಚಿಸಿದೆೆ ಎಂದು ಕಂಪನಿಯ ಸಿಇಒ ಮೋಹಿತ್ ಮಲ್ಹೋತ್ರಾ ಹೇಳಿದ್ದಾರೆ. ಬ್ರಿಟಾನಿಯಾ ಕಂಪನಿಯ ಇಂಧನ ಮತ್ತು ಪ್ಯಾಕೇಜಿಂಗ್ ವೆಚ್ಚ ಶೇ. 20ರಷ್ಟು ಏರಿದ್ದು, ಬೆಲೆ ಏರಿಕೆ ಅಥವಾ ತೂಕ ಇಳಿಕೆಯ ಬಗ್ಗೆ ಚಿಂತನೆ ನಡೆಸುತ್ತಿದೆ. ಎಚ್​ಯುುಎಲ್, ಪಿಡಿಲೈಟ್, ನೆಸ್ಲೆ ಇಂಡಿಯಾ ಸಹ ಇದೇ ಹಾದಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net