ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಕೇವಲ ಆಭರಣದ ಸ್ಥಾನ ಮಾತ್ರ ಇಲ್ಲ, ಅದಕ್ಕೊಂದು ಆರ್ಥಿಕ ಭದ್ರತೆಯ ಸ್ಥಾನವೂ ಇದೆ. ಕಳೆದ ಐದಾರು ವರ್ಷಗಳಲ್ಲಿ ಚಿನ್ನದ ಬೆಲೆ ಏರಿಯಾಗಿರುವ ರೀತಿ ಬೆರಗು ಹುಟ್ಟಿಸುವಂತಿದೆ. 2020ರಲ್ಲಿ ಕೇವಲ 50 ಸಾವಿರ ರೂ. ಆಸುಪಾಸಿನಲ್ಲಿದ್ದ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಈಗ 2026ರ ಮಾರ್ಚ್ನಲ್ಲಿ 1.70 ಲಕ್ಷದಿಂದ 1.75 ಲಕ್ಷ ರೂ.ಗೆ ತಲುಪಿದೆ. ಈ ಭಾರಿ ಏರಿಕೆಗೆ ಕೇವಲ ಆಭರಣದ ಬೇಡಿಕೆಯಷ್ಟೇ ಕಾರಣವಲ್ಲ, ಜಾಗತಿಕ ಭೌಗೋಳಿಕ ರಾಜಕೀಯ ಸಂಘರ್ಷಗಳೂ ಕಾರಣವಾಗುತ್ತಿವೆ.