ಮತ್ತೊಂದೆಡೆ, ಆರ್‌ಜೆಡಿ ಕೂಡ ಈ ವದಂತಿಗಳನ್ನು ತಕ್ಷಣವೇ ತಳ್ಳಿಹಾಕಿದೆ. ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಮಾತನಾಡಿ, ಸಂಸದ ಅಭಯ್ ಕುಶ್ವಾಹಾ ಅವರು ತಮ್ಮ ಔರಂಗಾಬಾದ್ ಕ್ಷೇತ್ರದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಈ ಭೇಟಿ ಸೀಮಿತವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.