ವಾಂಗ್ಚುಕ್ ಆರೋಗ್ಯ ಕ್ಷೀಣಿಸುತ್ತಿರುವ ವಿಷಯ ದೆಹಲಿ ಹೈಕೋರ್ಟ್ ಅಂಗಳಕ್ಕೆ ತಲುಪಿದ್ದು, ಪ್ರತಿದಿನ ಅವರ ಆರೋಗ್ಯ ತಪಾಸಣೆ ನಡೆಸಲು ಮತ್ತು ಸ್ಥಿತಿ ಹದಗೆಟ್ಟರೆ ವೈದ್ಯಕೀಯ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ವಾಂಗ್ಚುಕ್ ಸ್ಥಿತಿಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುವುದಾಗಿ ಸರ್ಕಾರವೂ ಕೋರ್ಟ್‌ಗೆ ತಿಳಿಸಿದೆ. ಕಳೆದ ಒಂದು ವಾರದಲ್ಲಿ ರಾಜಕಾರಣಿಗಳು, ಬರಹಗಾರರು, ನಟರು ಮತ್ತು ನಾಗರಿಕ ಸಮಾಜದ ಪ್ರಮುಖರು ಜಂತರ್ ಮಂತರ್‌ಗೆ ಭೇಟಿ ನೀಡಿ ವಾಂಗ್ಚುಕ್ಗೆ ಬೆಂಬಲ ಸೂಚಿಸಿದ್ದು, ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ(ಏಜೆನ್ಸೀಸ್).