ವರ್ಕ್​ಫ್ರಮ್​ ಹೋಮ್​, ಇಂಧನ ಮಿತ ಬಳಕೆ! ಪ್ರಧಾನಿ ಮೋದಿ ಸಲಹೆ ಬೆನ್ನಲ್ಲೇ ಭಾರತದಲ್ಲಿಯೂ 'ಸ್ಮಾರ್ಟ್ ಲಾಕ್​ಡೌನ್'​?

ಏನಿದು ಸ್ಮಾರ್ಟ್​ ಲಾಕ್​ಡೌನ್​
ಏನಿದು ಸ್ಮಾರ್ಟ್​ ಲಾಕ್​ಡೌನ್​
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದಿಂದ ಸದ್ಯ ಮಧ್ಯಪ್ರಾಚ್ಯ ಉದ್ವಿಗ್ನ
  • ಪ್ರಧಾನಿ ಮೋದಿ ಅವರಿಂದ ದೇಶದ ಜನತೆಗೆ ಮಹತ್ವದ ಸಲಹೆಗಳು
  • ಭಾರತದಲ್ಲೂ ಸ್ಮಾರ್ಟ್​ ಲಾಕ್​ಡೌನ್​ ಘೋಷಣೆ?
Smart Lockdown: ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದಿಂದ ಸದ್ಯ ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇದು ಜಗತ್ತಿನ ಹಲವು ದೇಶಗಳ ಮೇಲೆ ಭಾರೀ ಹೊಡೆತ ನೀಡಿದೆ. ತೈಲ, ಅನಿಲ ಸೇರಿದಂತೆ ಹಲವು ಬಿಕ್ಕಟ್ಟುಗಳು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಕೆಲವು ರಾಷ್ಟ್ರಗಳು ಜಾಗತಿಕ ಸಂಕಷ್ಟವನ್ನು ಎದುರಿಸಲಾಗಿದೆ ಸಂಪೂರ್ಣವಾಗಿ ತತ್ತರಿಸಿವೆ. ಈ ಬೆಳವಣಿಗೆಗಳ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ ಕೆಲವು ಮಹತ್ವದ ಸಲಹೆಗಳು ಸದ್ಯ ಭಾರೀ ಗೊಂದಲ ಮತ್ತು ಆತಂಕ ಸೃಷ್ಟಿಸಿದೆ.
ಇರಾನ್​ ಹೊರ್ಮುಜ್​ ಜಲಸಂಧಿಯನ್ನು ಮುಚ್ಚಿದ ಪರಿಣಾಮ ಮತ್ತು ಅಮೆರಿಕ ಯುದ್ಧವನ್ನು ಕೈಬಿಡದ ಹಿನ್ನೆಲೆ ಹಲವಾರು ದೇಶಗಳು ಸೀಮಿತ ಇಂಧನ ಮತ್ತು ಗ್ಯಾಸ್​ ಪೂರೈಕೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಮತ್ತೊಂದೆಡೆ, ಇದನ್ನೆಲ್ಲ ಸರಿದೂಗಿಸಿಕೊಂಡು ಹೋಗಲು ಇಂಧನ, ಆಹಾರ ಮತ್ತು ಸರಕು ಸಾಗಣೆ ಮೇಲಿನ ವೆಚ್ಚಗಳನ್ನು ಹೆಚ್ಚಿಸಲಾಗಿದೆ. ಇದು ಆಯಾ ದೇಶಗಳ ಜನರಿಗೆ ದೊಡ್ಡ ಆರ್ಥಿಕ ಹೊರೆಯಾಗಿದ್ದು, ಸರ್ಕಾರಗಳು ತಮಗೆ ಬೇರೇನೂ ದಾರಿಯಿಲ್ಲ ಎಂದು ಮೌನಕ್ಕೆ ಜಾರಿವೆ.
ಜಾಗತಿಕ ಪೂರೈಕೆ ಸರಪಳಿಯ ಮೇಲಿನ ಹೆಚ್ಚುತ್ತಿರುವ ಒತ್ತಡವು ಆರ್ಥಿಕತೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೇ ತೈಲ, ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನ, ಯುಎಇ ಸೇರಿ ನೆರೆಯ ದೇಶಗಳು ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿವೆ. ಮತ್ತೊಂದೆಡೆ, ಜನರಿಗೆ ಇಂಧನವನ್ನು ಮಿತವಾಗಿ ಬಳಸಿ, ಒಂದು ವರ್ಷ ಚಿನ್ನವನ್ನು ಖರೀದಿ ಮಾಡಬೇಡಿ, ಆದಷ್ಟು ಮನೆಯಿಂದಲೇ ಕೆಲಸ ಮಾಡಿ ಮತ್ತು ವಿದೇಶಿ ಪ್ರಯಾಣವನ್ನು ಮಿತಿಗೊಳಿಸಿ ಎಂದು ಕಿವಿಮಾತು ನೀಡಿರುವುದು ಸದ್ಯ ಸ್ಮಾರ್ಟ್​ ಲಾಕ್​ಡೌನ್​ನ ಮುನ್ಸೂಚನೆಯನ್ನು ಕೊಟ್ಟಂತಿದೆ.
ಪೆಟ್ರೋಲ್​, ಡಿಸೇಲ್​ ಸೇರಿದಂತೆ ವರ್ಕ್​ಫ್ರಮ್​ ಮಾಡಿ ಎಂದು ಮೋದಿ ಹೇಳಿಕೆಗಳು ಭಾರತೀಯರಲ್ಲಿ ಆತಂಕ ಮತ್ತು ಗೊಂದಲಗಳನ್ನು ಹೆಚ್ಚಿಸಿದೆ. ಇಲ್ಲಿಯೂ ಕೋವಿಡ್​ನಂತೆ ಲಾಕ್​ಡೌನ್ ಅಥವಾ ಸ್ಮಾರ್ಟ್ ಲಾಕ್​ಡೌನ್​ ಜಾರಿಯಾಗಬಹುದೇ? ಶೀಘ್ರದಲ್ಲಿ ಏನಾದರೂ ಭಾರತವು ಪಾಕಿಸ್ತಾನದಂತೆ ಸ್ಮಾರ್ಟ್ ಲಾಕ್‌ಡೌನ್ ಅನ್ನು ಪರಿಗಣಿಸಲಿದೆಯೇ? ಎಂಬ ಹತ್ತು ಹಲವು ಪ್ರಶ್ನೆಗಳು ಸದ್ಯ ಚರ್ಚೆಗೆ ಗ್ರಾಸವಾಗಿವೆ.

ಏನಿದು ಸ್ಮಾರ್ಟ್​ ಲಾಕ್​ಡೌನ್​?

ಇಂಧನ ಕೊರತೆಯ ನಡುವೆ, ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಪಾಕಿಸ್ತಾನವು ವ್ಯಾಪಾರ ಮತ್ತು ಚಟುವಟಿಕೆ ನಿರ್ಬಂಧಗಳೊಂದಿಗೆ ರಾಷ್ಟ್ರವ್ಯಾಪಿ ಸ್ಮಾರ್ಟ್ ಲಾಕ್‌ಡೌನ್ ಅನ್ನು ಘೋಷಿಸಿದೆ. ವರದಿಗಳ ಪ್ರಕಾರ, ಪಂಜಾಬ್, ಖೈಬರ್ ಪಖ್ತುನ್ಖ್ವಾ, ಬಲೂಚಿಸ್ತಾನ್, ಇಸ್ಲಾಮಾಬಾದ್ ಸೇರಿ ಹಲವು ಪ್ರಮುಖ ಪ್ರದೇಶಗಳಲ್ಲಿ ಶಾಪಿಂಗ್ ಮಾಲ್‌ ಮತ್ತು ವಾಣಿಜ್ಯ ಕೇಂದ್ರಗಳು ರಾತ್ರಿ 8 ಗಂಟೆಯೊಳಗೆ ಮುಚ್ಚಬೇಕಿದೆ. ಬೇಕರಿ, ರೆಸ್ಟೋರೆಂಟ್‌ ಮತ್ತು ಮದುವೆ ಹಾಲ್​ಗಳು ರಾತ್ರಿ 10 ಗಂಟೆಯೊಳಗೆ ಮುಚ್ಚಬೇಕು ಎಂದು ತಿಳಿಸಲಾಗಿದೆ.
ಇದರೊಟ್ಟಿಗೆ ಖಾಸಗಿ ನಿವಾಸಗಳಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಿಗೂ ಸಹ ಇದೇ ಸಮಯದ ಮಿತಿಯನ್ನು ಅನುಮತಿಸಲಾಗಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ತೈಲ ಮತ್ತು ಇಂಧನ ಬೆಲೆಗಳನ್ನು ನಿಭಾಯಿಸಲು ಪಾಕಿಸ್ತಾನದ ಪ್ರಯತ್ನಗಳು ಇದಾಗಿವೆ. ಪಾಕ್​ ಜಾರಿಗೊಳಿಸಿರುವ ಸ್ಮಾರ್ಟ್​ ಲಾಕ್​ಡೌನ್​ನಂತೆ ಭಾರತದಲ್ಲೂ ಇದು ಘೋಷಣೆ ಆಗಬಹುದೇ? ಜಾರಿಯಾದರೆ ಏನೆಲ್ಲ ಬದಲಾವಣೆಗಳು? ಎಂಬ ಪ್ರಶ್ನೆಗಳು ಇದೀಗ ಕಾಡಲಾರಂಭಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net