ಕಳೆದ 10 ದಿನಗಳಲ್ಲಿ 6000 ರೂ. ಇಳಿಕೆ! ಇನ್ನೂ ಕುಸಿತ ಕಾಣಲಿದೆಯೇ ಗೋಲ್ಡ್​ ಬೆಲೆ? ಹೀಗಿದೆ ತಜ್ಞರ ಮಾತು

ಚಿನ್ನದ ಬೆಲೆ
ಚಿನ್ನದ ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಒಂದು ವಾರದಿಂದ ಕುಸಿತದ ಹಾದಿ
  • 10 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 6 ಸಾವಿರ ರೂ.ಗೂ ಹೆಚ್ಚು ಇಳಿಕೆ
  • ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ದರಗಳು
ನವದೆಹಲಿ: ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನ-ಬೆಳ್ಳಿ ಬೆಲೆಗಳು ಕಳೆದ ಒಂದು ವಾರದಿಂದ ಕುಸಿತದತ್ತ ಮುಖಮಾಡಿರುವುದು ಸದ್ಯ ಚಿನ್ನದಂತ ಗ್ರಾಹಕರಲ್ಲಿ ಖುಷಿ ಮೂಡಿಸಿದೆ. ಆದರೆ, ಮತ್ತೆ ಏರಿಕೆ ಕಾಣುವ ಮುನ್ಸೂಚನೆಗಳು ದಿಢೀರ್​ ಖರೀದಿಯಿಂದ ಹಿಂದೇಟು ಹಾಕುವಂತೆ ಮಾಡಿದೆ.
ಚಿನ್ನದ ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆಗಳು ನಡೆಯುತ್ತಲೇ ಇವೆ. ಒಂದು ದಿನ ಚಿನ್ನದ ದರ ಹೆಚ್ಚಾದರೆ, ಮರುದಿನ ಇಳಿಕೆಯಾಗಿರುತ್ತದೆ. ಹೀಗೇ ನೋಡುವುದಾದರೆ, ಕಳೆದ 10 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 6 ಸಾವಿರ ರೂ.ಗಳಿಗೂ ಹೆಚ್ಚು ಕುಸಿದಿದೆ. ಆದಾಗ್ಯೂ, ಮುಂಬರುವ ವಾರಗಳಲ್ಲಿ ಚಿನ್ನದ ದರ ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಹೆಚ್ಚಳಕ್ಕೆ ಕಾರಣವೇನು?

ಅಂತರರಾಷ್ಟ್ರೀಯ ಅನಿಶ್ಚಿತತೆಗಳು, ಅಮೆರಿಕದ ಸುಂಕಗಳು, ಫೆಡ್ ಬಡ್ಡಿದರಗಳು ಮತ್ತು ಡಾಲರ್ ಮೌಲ್ಯವು ಚಿನ್ನದ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಇತ್ತೀಚೆಗೆ, ಯುಎಸ್ ಫೆಡ್ ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ನಿರೀಕ್ಷೆಗಳು ಮಸುಕಾಗಿರುವುದರಿಂದ ಚಿನ್ನದ ಬೆಲೆ ತೀವ್ರವಾಗಿ ಹೆಚ್ಚಳ ಕಂಡಿದೆ.
ಮುಂಬರುವ ವಾರಗಳಲ್ಲಿ ಚಿನ್ನದ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಊಹಿಸುತ್ತಾರೆ. ಪ್ರಸ್ತುತ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ ಐದು ಡಾಲರ್ ಹೆಚ್ಚಾಗಿದೆ. ಪ್ರಸ್ತುತ, ಒಂದು ಔನ್ಸ್ ಚಿನ್ನ 4,065 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,25,990 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,500 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,25,840 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,350 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,25,840 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,15,350 ರೂ. ಆಗಿದೆ.

ಹೀಗಿದೆ ಬೆಳ್ಳಿ ಬೆಲೆ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,64,000 ರೂ.ಗೆ ತಲುಪಿದೆ. ಮುಂಬೈ,
  • ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,64,000 ರೂ. ಇದೆ. ಇನ್ನು ಚೆನ್ನೈ,
  • ಹೈದರಾಬಾದ್‌, ತೆಲಂಗಾಣದಲ್ಲಿ ಪ್ರತಿ ಕೆಜಿ ಬೆಲೆ 1,72,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net