2026ರಲ್ಲಿ ರೆಕಾರ್ಡ್ ಬ್ರೇಕ್ ಮಾಡಲಿದೆಯೇ ಚಿನ್ನದ ದರ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯ? gold
gold
Published on:
Copied
Follow Us
ಬೆಂಗಳೂರು: ( gold) ವಿಶ್ವದ ಹಲವು ಪ್ರಮುಖ ಘಟನೆಗಳನ್ನು ಮೊದಲೇ ನಿಖರವಾಗಿ ಹೇಳಿದ್ದಾರೆಂದು ನಂಬಲಾದ ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಬಾಬಾ ವಂಗಾ, ಚಿನ್ನದ ಬೆಲೆಯ ಬಗ್ಗೆಯೂ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2026ರಲ್ಲಿ ಜಗತ್ತು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ. ಈ ಸಮಯದಲ್ಲಿ ನಗದು (Cash) ಮೌಲ್ಯ ಕಳೆದುಕೊಳ್ಳಬಹುದು ಮತ್ತು ಜನರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಾರೆ.
ಆರ್ಥಿಕ ಬಿಕ್ಕಟ್ಟು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ, ಅನೇಕ ಜನರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಾರೆ. ಇದರಿಂದಾಗಿ, ಚಿನ್ನದ ಬೆಲೆ ಸುಮಾರು 25 ರಿಂದ 40 ಪ್ರತಿಶತದಷ್ಟು ಹೆಚ್ಚಾಗಬಹುದು.
ಚಿನ್ನದ ಬೇಡಿಕೆ ಹೆಚ್ಚಾಗಿ, ಬೆಲೆಯು ದಾಖಲೆ ಮಟ್ಟವನ್ನು ತಲುಪಲಿದೆ.ಈಗ ಯಾರು ಚಿನ್ನವನ್ನು ಹೊಂದಿದ್ದಾರೋ ಅಥವಾ ಹೂಡಿಕೆ ಮಾಡಿದ್ದಾರೋ, ಅವರು 2026ರ ವೇಳೆಗೆ ದೊಡ್ಡ ಮಟ್ಟದ ಲಾಭ ಗಳಿಸಲಿದ್ದಾರೆ ಎಂದು ಈ ಭವಿಷ್ಯವಾಣಿ ಹೇಳುತ್ತದೆ.
ಕೇವಲ ಆರ್ಥಿಕತೆಯಲ್ಲದೆ, 2026ರ ವೇಳೆಗೆ ಜಗತ್ತಿನಲ್ಲಿ ದೊಡ್ಡ ಮಟ್ಟದ ನೈಸರ್ಗಿಕ ವಿಕೋಪಗಳು (ಸುನಾಮಿ, ಭೂಕಂಪ) ಸಂಭವಿಸಬಹುದು ಮತ್ತು ಮಾನವರು ಬಾಹ್ಯಾಕಾಶ ಜೀವಿಗಳೊಂದಿಗೆ ಸಂಪರ್ಕ ಹೊಂದಬಹುದು ಎಂಬ ವಿಚಿತ್ರ ಮುನ್ಸೂಚನೆಗಳನ್ನೂ ಅವರು ನೀಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಏರಿಕೆಯು ಬಾಬಾ ವಂಗಾ ಅವರು ಅಂದು ಹೇಳಿದ ಮಾತುಗಳು ನಿಜವಾಗುತ್ತಿವೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮಾರುಕಟ್ಟೆ ತಜ್ಞರು ಕೂಡ ಹೂಡಿಕೆದಾರರಿಗೆ ಚಿನ್ನವು ದೀರ್ಘಕಾಲದವರೆಗೆ ಸುರಕ್ಷಿತ ಹೂಡಿಕೆ ಎಂದು ಸಲಹೆ ನೀಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸತತವಾಗಿ ಏರುತ್ತಿದೆ. ಜಾಗತಿಕ ಆರ್ಥಿಕ ಬದಲಾವಣೆಗಳಿಂದಾಗಿ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಕೈಗೆಟುಕದಷ್ಟು ಏರಲಿದೆ.
ಬಾಬಾ ವಂಗಾ ಯಾರು?
1911 ರಲ್ಲಿ ಜನಿಸಿದ ಕುರುಡು ಬಲ್ಗೇರಿಯನ್ ಅತೀಂದ್ರಿಯವಾದಿ ಬಾಬಾ ವಂಗಾ, ಭವಿಷ್ಯದ ಘಟನೆಗಳನ್ನು ಊಹಿಸುವ ಸಾಮರ್ಥ್ಯಕ್ಕಾಗಿ ಖ್ಯಾತಿಯನ್ನು ಗಳಿಸಿದರು. 'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದು ಕರೆಯಲ್ಪಡುವ ಅವರು ತಮ್ಮ ಭವಿಷ್ಯವಾಣಿಗಳನ್ನು ಬರವಣಿಗೆಯ ಬದಲು ಮೌಖಿಕವಾಗಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅನೇಕ ಭವಿಷ್ಯವಾಣಿಗಳಿಗೆ ಪುರಾವೆಗಳಿಲ್ಲದಿದ್ದರೂ, ಅವರ ನಿಗೂಢ ಪರಂಪರೆ ಇನ್ನೂ ಜಾಗತಿಕ ಕುತೂಹಲವನ್ನು ಸೆರೆಹಿಡಿಯುತ್ತದೆ.