ಪತ್ನಿ ಹೊಡೆದಿದ್ದಕ್ಕೆ ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್​! ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್​ ವಿಷಯ ಬಯಲು

ಪತ್ನಿ ಹೊಡೆದಿದ್ದಕ್ಕೆ ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್​!
ಪತ್ನಿ ಹೊಡೆದಿದ್ದಕ್ಕೆ ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್​!
Published on

ಪ್ರಮುಖ ಮುಖ್ಯಾಂಶಗಳು

  • ಜಗಳದ ವೇಳೆ ಪತ್ನಿ ಮೊಬೈಲ್ ಫೋನ್‌ನಿಂದ ಹೊಡೆದಿದ್ದಕ್ಕೆ ಪತಿ ಸಾವು!
  • ಮೊಬೈಲ್ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ವ್ಯಕ್ತಿ ಹಠಾತ್ ಸಾವು
  • ಮರಣೋತ್ತರ ಪರೀಕ್ಷೆಯಲ್ಲಿ ಆತ ಸತ್ತಿರುವುದು ಪತ್ನಿಯ ಹೊಡೆತದಿಂದಲ್ಲ ಎಂದು ವರದಿ
ಭುವನೇಶ್ವರ್​: ಒಡಿಶಾದಲ್ಲಿ ನಡೆದ ಒಂದು ಆಘಾತಕಾರಿ ಬೆಳಕಿಗೆ ಬಂದಿದ್ದು, ಬೋಲಾಂಗಿರ್ ಜಿಲ್ಲೆಯಲ್ಲಿ ಕೌಟುಂಬಿಕ ಕಲಹದ ಸಂದರ್ಭದಲ್ಲಿ ಆಕ್ರೋಶಗೊಂಡ ಪತ್ನಿ, ಪತಿಯ ತಲೆಗೆ ಮೊಬೈಲ್ ಫೋನ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ಪತಿ ಮೃತಪಟ್ಟ ಘಟನೆ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಸಾವಿಗೀಡಾದ ವ್ಯಕ್ತಿಯ ಕುಟುಂಬಸ್ಥರು ಮತ್ತು ಸ್ಥಳೀಯರು ಆತನ ಹೆಂಡತಿಗೆ ಹಿಡಿಶಾಪ ಹಾಕುತ್ತಿದ್ದರು. ಆದರೀಗ ಹೊರಬಿದ್ದ ಮರಣೋತ್ತರ ಪರೀಕ್ಷೆಯಲ್ಲಿ ನಂಬಲು ಅಸಾಧ್ಯ ಎನ್ನಲಾದ ಸಂಗತಿಯೊಂದು ಬಯಲಾಗಿದೆ.
ಆರಂಭಿಕ ಹಂತದಲ್ಲಿ ಪ್ರಾಥಮಿಕ ವರದಿಗಳು, ಶನಿವಾರದಂದು ದಂಪತಿ ನಡುವೆ ತಮ್ಮ ಮನೆಯಲ್ಲಿ ಯಾವುದೋ ಒಂದು ವಿಷಯಕ್ಕೆ ಸಣ್ಣದಾಗಿ ಶುರುವಾದ ವಾಗ್ವಾದವು ತೀವ್ರ ಸ್ವರೂಪಕ್ಕೆ ತಿರುಗಿತು. ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡ ಪತ್ನಿ, ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಳು. ಪತ್ನಿಯ ಈ ಹಠಾತ್ ದಾಳಿಯಿಂದಾಗಿ ತಲೆಗೆ ತೀವ್ರ ಪೆಟ್ಟ ಬಿದ್ದು ಪತಿ ಸ್ಥಳದಲ್ಲೇ ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಬೋಲಾಂಗಿರ್‌ನಲ್ಲಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದ್ದರಿಂದ, ವೈದ್ಯರ ಸಲಹೆಯ ಮೇರೆಗೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇದರಿಂದಾಗಿ ನಿರಾಳರಾದ ಕುಟುಂಬಸ್ಥರು ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದರು.
ಆದರೆ, ಮನೆಗೆ ತಲುಪಿದ ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಪರಿಸ್ಥಿತಿ ಮತ್ತೊಮ್ಮೆ ಹಠಾತ್ ಆಗಿ ಕ್ಷೀಣಿಸಿತು. ಅವರು ತೀವ್ರ ಅಸ್ವಸ್ಥರಾಗುತ್ತಿದ್ದಂತೆ ಗಾಬರಿಗೊಂಡ ಕುಟುಂಬದ ಸದಸ್ಯರು ಯಾವುದೇ ತಡ ಮಾಡದೆ ಅವರನ್ನು ಮತ್ತೊಮ್ಮೆ ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ದರು. ಆದರೆ ಈ ಬಾರಿ ಅದೃಷ್ಟ ಕೈಕೊಟ್ಟಿತ್ತು. ಆತ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದರು. ಆದರೀಗ ಬಂದಿರುವ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ನಲ್ಲಿ ವ್ಯಕ್ತಿ ಸಾವಿಗೀಡಾಗಿರುವುದು ತಲೆಗೆ ಬಿದ್ದ ಪೆಟ್ಟಿನಿಂದಲ್ಲ. ಬದಲಿಗೆ ಲಿವರ್​ ಫೇಲ್ಯೂರ್​ನಿಂದ ಎಂದು ಹೇಳಲಾಗಿದೆ.
ಕುಟುಂಬದವರು ಆರೋಪಿಸಿದಂತೆ ಮೃತನ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ, ಅತಿಯಾದ ಮದ್ಯ ಸೇವನೆಯಿಂದ ಲಿವರ್​ ಸಂಪೂರ್ಣವಾಗಿ ಡ್ಯಾಮೇಜ್​ ಆದರಿಂದ ಆತ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಕುರಿತು ಲಕ್ಷ್ಮಿಜೋರ್ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ಕುಮಾರ್ ಸಾಹೂ ಮಾತನಾಡಿ, ವಿಪರೀತ ಕುಡಿತದಿಂದ ಅವರ ಲಿವರ್​ ವೈಫಲ್ಯಗೊಂಡಿರುವುದು ಇಲ್ಲಿ ಸ್ಪಷ್ಟವಾಗಿದೆ ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net