ಪತ್ನಿ ಸ್ವಾಮಿನಾರಾಯಣ ಪಂಥದ ಅನುಯಾಯಿಯಾಗಿದ್ದರು. ಹಾಗಾಗಿ ಆಕೆ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಂಪೂರ್ಣವಾಗಿ ಸೇವಿಸುತ್ತಿರಲಿಲ್ಲ. ಆದರೆ, ಆಕೆಯ ಅತ್ತೆ, ಮಾವ ಪತಿ ಈ ಆಹಾರವನ್ನು ಸೇವಿಸುತ್ತಿದ್ದರು. ಈ ವಿಚಾರದಿಂದ ದಾಂಪತ್ಯ ಜೀವನದಲ್ಲಿ ಪ್ರತಿನಿತ್ಯ ಜಗಳಗಳು ಪ್ರಾರಂಭವಾಗುತ್ತಿದ್ದವು. ವಾದ- ವಿವಾದ ಉಲ್ಬಣಗೊಂಡ ನಂತರ, ಮಹಿಳೆಯು ತನ್ನ ಮಗುವಿನೊಂದಿಗೆ ಗಂಡನ ಮನೆಯನ್ನು ತೊರೆದಳು.