ಹೋಟೆಲ್‌ನಲ್ಲಿ ಲವರ್ ಜೊತೆ ಸಿಕ್ಕಿಬಿದ್ದ ಹೆಂಡತಿ: ಪತಿ ಗಳಗಳನೆ ಕಣ್ಣೀರು! | Lover

 Lover
Lover
Published on
ಅಮೃತಸರ: 15 ವರ್ಷಗಳಿಂದ ವಿವಾಹಿತರಾಗಿದ್ದ ಪತ್ನಿಯನ್ನ ಇದೀಗ ಹೊಟೇಲ್​ವೊಂದರಲ್ಲಿ ಪರ ಪುರುಷನ ಜೊತೆ ರೆಡ್ ಹ್ಯಾಂಡ್ ಆಗಿ ಆಕೆಯ ಗಂಡ ಹಿಡಿದಿದ್ದಾರೆ.
ಹೌದು, ಪಂಜಾಬ್‌ನ ಅಮೃತಸರ್‌ನಲ್ಲಿ ನಡೆದ ಈ ಘಟನೆ ಸಾಕಷ್ಟು ವೈರಲ್ ಆಗಿದೆ. 15 ವರ್ಷಗಳಿಂದ ವಿವಾಹಿತರಾಗಿದ್ದ ರವಿ ಗುಲಾಟಿ ಎಂಬ ವ್ಯಕ್ತಿ ತಮ್ಮ ಪತ್ನಿ ಹಿಮಾನಿಯನ್ನು ಹೋಟೆಲ್‌ನಲ್ಲಿ ಬೇರೊಬ್ಬ ವ್ಯಕ್ತಿಯ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ರವಿ ಅವರ ಪ್ರಕಾರ, 2018ರಲ್ಲೂ ಇದೇ ರೀತಿ ಪತ್ನಿ ಬೇರೊಬ್ಬನ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದರು. ಆಗ ಮಕ್ಕಳ ಭವಿಷ್ಯಕ್ಕಾಗಿ ಕ್ಷಮಿಸಿದ್ದರು ಮತ್ತು ಕುಟುಂಬದವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಇತ್ತೀಚೆಗೆ ಮತ್ತೆ ಅನುಮಾನ ಬಂದಿದ್ದರಿಂದ ಪತ್ನಿಯ ಸ್ಕೂಟರ್‌ಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದರು.
ಒಂದು ದಿನ ಪತ್ನಿ ಮನೆಯಿಂದ ಹೊರಗೆ ಹೋದ ನಂತರ ಫೋನ್‌ಗೆ ರಿಸೀವ್ ಮಾಡದಿದ್ದಾಗ ಜಿಪಿಎಸ್ ಮೂಲಕ ಲೊಕೇಷನ್ ಟ್ರ್ಯಾಕ್ ಮಾಡಿ ಹೋಟೆಲ್‌ಗೆ ತೆರಳಿ ಆಕೆಯನ್ನು ಸ್ನೇಹಿತನ ಜೊತೆ ಕಂಡುಹಿಡಿದಿದ್ದಾರೆ. ಈ ಘಟನೆಯ ವಿಡಿಯೋದಲ್ಲಿ ರವಿ ಅವರು ಬಿಕ್ಕಿ ಬಿಕ್ಕಿ ಅತ್ತು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವುದು ಕಾಣಿಸುತ್ತದೆ.
ಪತ್ನಿ ಈಗ ಮದುವೆ ಮುಂದುವರಿಸಲು ಬಯಸುವುದಿಲ್ಲ ಮತ್ತು ತಾಯಿಯ ಮನೆಗೆ ಹೋಗಲು ಇಚ್ಛೆ ವ್ಯಕ್ತಪಡಿಸಿದ್ದಾಳೆ ಎಂದು ವರದಿಗಳು ತಿಳಿಸಿವೆ. ಈ ಘಟನೆ ಮದುವೆಯಲ್ಲಿ ನಂಬಿಕೆ, ಗೌಪ್ಯತೆ ಮತ್ತು ಕ್ಷಮೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net