ಅವಳೇ ಇಲ್ಲದ ಮೇಲೆ ಈ ಹಣವೇಕೆ? ಪತ್ನಿ ಜೊತೆ ವಿಶ್ವ ಪರ್ಯಟನೆಗೆಂದು ಕೂಡಿಟ್ಟಿದ್ದ ಹಣ; 25 ಲಕ್ಷ ಸೇನೆಗೆ ದಾನ ಮಾಡಿದ ಮಾಜಿ ಬ್ಯಾಂಕ್​ ಉದ್ಯೋಗಿ! Bank Employee Donates 25 Lakhs

25 ಲಕ್ಷ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ನಿವೃತ್ತ ಬ್ಯಾಂಕ್​ ಉದ್ಯೋಗಿ
25 ಲಕ್ಷ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ನಿವೃತ್ತ ಬ್ಯಾಂಕ್​ ಉದ್ಯೋಗಿ
Published on

ಪ್ರಮುಖ ಮುಖ್ಯಾಂಶಗಳು

  • ಹೆಂಡತಿ ಜೊತೆ ಜಗತ್ತು ಸುತ್ತಲು ಕೂಡಿಟ್ಟಿದ್ದ 25 ಲಕ್ಷ
  • 25 ಲಕ್ಷ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ನಿವೃತ್ತ ಬ್ಯಾಂಕ್​ ಉದ್ಯೋಗಿ
  • ನಾಗ್ಪುರದ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀಕಾಂತ್ ಸಹಸ್ರಬುದ್ಧಿ ಅವರ ಹೃದಯಸ್ಪರ್ಶಿ ಕಥೆ
ಮುಂಬೈ: ಮನುಷ್ಯ ಮಾಡುವುದೆಲ್ಲಾ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಮಾತಿದೆ. ಅಂದರೆ ಪ್ರತಿಯೊಬ್ಬರು ತಮ್ಮ ಸ್ವಂತಕ್ಕಾಗಿ ದುಡಿಯುತ್ತಾರೆ ಹೊರತು ಬೇರೊಬ್ಬರ ಶ್ರೇಯೊಭಿವೃದ್ಧಿಗಲ್ಲ. ಆದರೆ ನಾಗ್ಪುರದ ನಿವೃತ್ತ ಬ್ಯಾಂಕ್​ ಉದ್ಯೋಗಿಯೊಬ್ಬರು, ತಾವು ಕಷ್ಟಪಟ್ಟು ಸಂಪಾದಿಸಿದ್ದ 25 ಲಕ್ಷ ರೂಪಾಯಿಗಳನ್ನು (Bank Employee Donates 25 Lakhs) ಭಾರತೀಯ ಸೇನೆಗೆ ದಾನ ಮಾಡಿ ಮಾದರಿಯಾಗಿದ್ದಾರೆ.
ಪಂಜಾಬ್​ ನ್ಯಾಷನಲ್​​ ಬ್ಯಾಂಕ್​ನಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡಿ ನಿವೃತ್ತರಾಗಿದ್ದ ಶ್ರೀಕಾಂತ್ ಸಹಸ್ರಬುದ್ಧಿ ಈ ದಾನವನ್ನು ನೀಡಿರುವ ಅಧುನಿಕ ಕರ್ಣನಾಗಿದ್ದಾನೆ. ಇವರು ಹೇಳುವ ಪ್ರಕಾರ, ತಮ್ಮ ಪತ್ನಿ ಜೊತೆ ಪ್ರಪಂಚ ಪರ್ಯಟನೆ ಮಾಡಲು 25 ಲಕ್ಷ ರೂಪಾಯಿಯನ್ನು ಕುಡಿಟ್ಟಿದ್ದರಂತೆ. ಆದರೆ ತಮ್ಮ ಪತ್ನಿ ಮರಣ ಹೊಂದಿದ ಕಾರಣ ಈ ಹಣವನ್ನು ಸೇನೆಗೆ ದಾನವಾಗಿ ನೀಡಿದ್ದೆನೆಂದು ಶ್ರೀಕಾಂತ್ ಹೇಳಿದ್ದಾರೆ.

ಅವಳೇ ಇಲ್ಲದ ಮೇಲೆ ಹಣವೇಕೆ?

ನಾನು ನನ್ನ ಹೆಂಡತಿ ಇಬ್ಬರು ಪಂಜಾಬ್​ ನ್ಯಾಷನಲ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೆವು. ನಿವೃತ್ತಿ ನಂತರ ಇಬ್ಬರು ಪ್ರಪಂಚದ ವಿವಿಧ ದೇಶಗಳನ್ನು ನೋಡುವ ಆಸೆಯಿಂದ ಹಣವನ್ನು ಕೂಡಿಕ್ಕುತ್ತಿದ್ದೆವು. ಆದರೆ ಅವಳು ಹತ್ತು ವರ್ಷದ ಹಿಂದೆ ನಿಧನವಾದಳು.
ಅವಳ ಸಾವಿನ ಬಳಿಕ ನನಗೆ ಯಾವ ದೇಶವನ್ನು ನೋಡುವ ಮನಸ್ಸಾಗಲಿಲ್ಲ. ಈಗ ನಿವೃತ್ತನಾದ ಬಳಿಕ ನಾನು ಕೂಡಿಟ್ಟ ಪಿಎಫ್​ ಖಾತೆಯಿಂದ 25 ಲಕ್ಷ ರೂಪಾಯಿ ದೊರೆತಿದೆ. ಅದನ್ನು ನಾನು ಭಾರತೀಯ ಸೇನೆಗೆ ದಾನವಾಗಿ ನೀಡಿದೆ. ಇದರಿಂದ ನಮ್ಮಿಬ್ಬರ ಪ್ರಪಂಚ ಪರ್ಯಟನೆ ಕನಸು ನನಸಾಯಿತು ಎಂದು ಭಾವಿಸಿದ್ದೆನೆ ಎಂದು ಭಾವುಕರಾಗಿ ಹೇಳಿದ್ದಾರೆ.

ಭಾವುಕರಾದ ನೆಟ್ಟಿಗರು!

ಶ್ರೀಕಾಂತ್​ ಅವರ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಕಣ್ಗಾಲಿಗಳು ಒದ್ದೆಯಾಗಿವೆ. ಭಾರತೀಯ ಸೇನೆಯ ಮೇಲೆ ನಿಮಗಿರುವ ಅಭಿಮಾನಕ್ಕೆ ಶರಣು ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ. ನೋಡಿ ಇದು ಆದರ್ಷ ದಾಂಪತ್ಯದ ಲಕ್ಷಣ ಎಂದು ಇನ್ನೊಬ್ಬರು ಹೇಳಿದರೆ, ಪತ್ನಿ ಸಾವಿನ ಬಳಿಕ ಮೋಜು-ಮಸ್ತಿ ಮಾಡುವ ಗಂಡಸರಿಗೆ ಇವರು ಆದರ್ಶಪ್ರಾಯ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net