

https://twitter.com/ParagShahBJP/status/2099357542535319818ಪ್ರಮುಖ ಮುಖ್ಯಾಂಶಗಳು
ಜೈನಗುರು ಸಲಹೆಯಂತೆ ಕೆಲವು ಗಂಟೆಗಳ ಕಾಲ ಭಿಕ್ಷುಕನ ವೇಷ ಧರಿಸಿದ ಶ್ರೀಮಂತ ಶಾಸಕ ಪರಾಗ್ ಶಾ.
3,383 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ಹೊಂದಿರುವ ಶಾಸಕ ಪರಾಗ್ ಶಾ.
ಮುಂಬೈ ಜನರು ಎಂತಹ ಸಹಾಯ ಇರುವ ಮನಸ್ಥಿತಿ ಇರುವವರು ಎಂದು ಅನುಭವ ಹಂಚಿಕೊಂಡ ಶಾಸಕ.
BJP MLA Parag Shah turns beggar for a day on Jain guru advice:
ಹರಿದು ಕೊಳಕಾದ ಬಟ್ಟೆ, ಒರಟು ಕೂದಲು, ಒಂದೈದು ವಾರ ತೊಳೆಯದ ಮುಖ ಹೊತ್ತು ಘಾಟ್‌ಕೋಪರ್ ಬೀದಿಗಳಲ್ಲಿ ಓಡಾಡುತ್ತಿರುವ ಭಿಕ್ಷುಕ..ಈತ ಸಾಮಾನ್ಯ ವ್ಯಕ್ತಿ ಅಲ್ಲ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರಾದ ಬಿಜೆಪಿಯ ಶಾಸಕ ಪರಾಗ್ ಶಾ.
ಹೌದು, ಜೈನ ಆಧ್ಯಾತ್ಮಿಕ ಗುರು ನಮ್ರಮುನಿ ಸಲಹೆ ಮೇರೆಗೆ ಘಾಟ್‌ಕೋಪರ್ (ಪೂರ್ವ) ಕ್ಷೇತ್ರದ ಶಾಸಕರಾಗಿರುವ ಪರಾಗ್ ಶಾ ಅವರು ಒಂದು ದಿನದ ಮಟ್ಟಿಗೆ ತಮ್ಮ ಕಾರು, ಭದ್ರತೆ, ದುಬಾರಿ ವಸ್ತುಗಳನ್ನು ಬಿಟ್ಟು ಭಿಕ್ಷುಕನಂತೆ ವೇಷ ಧರಿಸಿ ಘಾಟ್‌ಕೋಪರ್ ರಸ್ತೆಗಳಲ್ಲಿ ಹಲವು ಗಂಟೆ ಕಾಲ ಕಳೆದ್ದಿದ್ದಾರೆ. ಇದು ಜೀವನದ ನೈಜತೆಯನ್ನುತಿಳಿಸಿಕೊಟ್ಟ ದಿನ ಎಂದು ಹೇಳಿಕೊಂಡಿದ್ದಾರೆ.
ವೃತ್ತಿಯಲ್ಲಿ ಉದ್ಯಮಿಯಾಗಿರುವ ಪರಾಗ್ ಶಾ ಜೈನ ಧರ್ಮೀಯರಿಗೆ ಅತ್ಯಂತ ಪವಿತ್ರಎಂದು ಪರಿಗಣಿಸಿರುವ ವಿಶೇಷ ಮಾಸದಲ್ಲಿ ಜೈನ ಆಧ್ಯಾತ್ಮಿಕ ಗುರು ನಮ್ರಮುನಿ ಅವರ ಸಲಹೆಯ ಮೇರೆಗೆ ಒಂದು ದಿನದ ಮಟ್ಟಕ್ಕೆ ತಮ್ಮ ಲಕ್ಷುರಿ ಬದುಕನ್ನು ಬದಿಗಿಟ್ಟು ಭಿಕ್ಷುಕನಂತೆ ವೇಷಧರಿಸಿ, ಯಾರು ತಮ್ಮನ್ನು ಪತ್ತೆ ಹಚ್ಚದಂತೆ, ಬೀದಿ ಬೀದಿ ಅಲೆದಾಡಿರುವ ವಿಡಿಯೋ ವೈರಲ್ ಆಗಿದೆ.
ಭಿಕ್ಷುಕನಾಗಿ ಸಮಯ ಕಳೆದ ಬಗ್ಗೆ ಶಾಸಕರ ಮಾತು
ನನ್ನನ್ನು ಭೇಟಿಯಾಗಲು ಸಾಲು ನಿಲ್ಲುವ ಜನ, ನಾನು ಅವರ ಬಳಿ ಅಂಗಲಾಚಿ ಹಣ ಕೇಳುವಾಗ ಮಾನವೀಯತೆಯಿಂದ ಹಣ ಕೊಟ್ಟರು. ಒಬ್ಬರು ಏನಾದರೂ ತಿನ್ನಿ ಬಾಬಾ ಎಂದು 20 ರೂ. ಕೊಟ್ಟರು. ಜನರು ನಂಗಿಂತ ದೊಡ್ಡವರಾದರು. ಹಾಗಾಗಿ, ಅದೇ ಜೀವನದ ವಾಸ್ತವಿಕತೆ. ಈ ಘಟನೆಯು ಮುಂಬೈ ಜನತೆಯ ಸಹಾಯ ಮಾಡುವ ಗುಣವನ್ನು ನನಗೆ ತೋರ್ಪಡಿಸಿದೆ.
'ಒಬ್ಬರು ನನಗೆ 'ಹೋಗು ಬಾಬಾ, ಊಟ ಮಾಡು' ಎಂದು 20 ರೂ. ನೀಡಿದರು. ಅಲ್ಲಿ ಒಬ್ಬ ಸಮೋಸಾ ಮಾರಾಟಗಾರನಿದ್ದ. ನಾನು ಆತನ ಬಳಿ ಹೋಗಿ ಸಮೋಸಾ ಕೇಳಿದೆ, ಆತ ಯಾವುದೇ ಹಣ ಪಡೆಯದೆ ಸಮೋಸಾ ನೀಡಿದ. ಮುಂಬೈ ನಗರದ ಜನತೆ ಪರಸ್ಪರ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ ಎಂಬುದನ್ನು ನಾನು ಕಂಡುಕೊಂಡೆ' ಎಂದು ಶಾ ವಿವರಿಸಿದರು.
'ನನ್ನ ಬಳಿ ಹಣವಿಲ್ಲ ಎಂದು ಸಮೋಸಾ ಮಾರಾಟಗಾರನಿಗೆ ಹೇಳಿದಾಗ, ಆತ ಮುಖವನ್ನು ಸಿಂಡರಿಸಿಕೊಳ್ಳದೆ ನಗುತ್ತಲೇ ಸಮೋಸಾ ನೀಡಿದ - ಆ ವ್ಯಕ್ತಿ ಬಹಳ ಸಣ್ಣ, ಬಡ ವ್ಯಾಪಾರಿ, ಆದರೂ ಒಮ್ಮೆಯೂ ಮುಖ ಸಿಂಡರಿಸಿಕೊಳ್ಳದೆ ಸಮೋಸಾ ಕೊಟ್ಟರು' ಎಂದು ಅವರು ತಿಳಿಸಿದರು.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಪರಾಗ್ ಶಾ, ಭಿಕ್ಷೆ ಬೇಡುವುದು ಮಾತ್ರವಲ್ಲದೆ, ತಮಗೆ ಸಿಕ್ಕ ಆಹಾರವನ್ನು ಸೇವಿಸಿದರು ಮತ್ತು ಭಿಕ್ಷುಕನಂತೆ ರಸ್ತೆ ಬದಿ ಕುಳಿತರು. ನಂತರ ತಮ್ಮ ಅನುಭವವನ್ನು ಗುರುವಿಗೆ ಹಾಗೂ ಇತರರಿಗೆ ವಿವರಿಸಿದರು. ಮೇಕಪ್ ತೆಗೆದ ಬಳಿಕ ಶಾ ಅವರು ಭಿಕ್ಷುಕನ ವೇಷದಲ್ಲಿ ತಾವು ಭೇಟಿ ನೀಡಿದ್ದ ಕೆಲವು ಸ್ಥಳಗಳಿಗೆ ಮರುಭೇಟಿ ನೀಡಿ, ಅದೇ ಜನರೊಂದಿಗೆ ಮಾತನಾಡಿದರು.
ಪರಾಗ್ ಶಾ ಅವರು ತಮ್ಮ ಅಪಾರ ಸಂಪತ್ತಿಗೆ ಹೆಸರುವಾಸಿಯಾಗಿದ್ದಾರೆ. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸಲ್ಲಿಸಿದ ಚುನಾವಣಾ ಆಪಾದನಾ ಪತ್ರದಲ್ಲಿಅವರು 3,383 ಕೋಟಿ ರೂ.ಗಳಿಗೂ ಅಧಿಕ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಆ ಮೂಲಕ ಅವರು ಆ ಸಮಯದಲ್ಲಿ ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರು, (ಏಜೆನ್ಸೀಸ್).