ಚಿನ್ನ ಪರವಾಗಿಲ್ಲ.. ಆದ್ರೆ ಬೆಳ್ಳಿಯ ಬೆಲೆ ಏಕೆ ಇಷ್ಟೊಂದು ಏರುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.. | Silver

Silver
Silver
Published on
ನವದೆಹಲಿ: ಹೂಡಿಕೆದಾರರು ಚಿನ್ನದ ಹಿಂದೆ ಬಿದ್ದಿರುವಾಗ ಇತ್ತ ಬೆಳ್ಳಿ ಸದ್ದಿಲ್ಲದೆ ಮಾರುಕಟ್ಟೆಯನ್ನು ಅಚ್ಚರಿಗೊಳಿಸುತ್ತಿದೆ. ಒಂದೇ ದಿನದ ತೀಕ್ಷ್ಣವಾದ ಏರಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಸ್ಥಾಪಿಸಿದ್ದಲ್ಲದೆ, ಬೆಳ್ಳಿ ಇದ್ದಕ್ಕಿದ್ದಂತೆ ಇಷ್ಟೊಂದು ದುಬಾರಿಯಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೌದು, ಹೌದು, 2025ರಲ್ಲಿ ಬೆಳ್ಳಿಯ ಬೆಲೆ ಚಿನ್ನಕ್ಕಿಂತ ಹೆಚ್ಚು ವೇಗವಾಗಿ ಏರುತ್ತಿದೆ. ಡಿಸೆಂಬರ್ 22ರ ಹೊತ್ತಿಗೆ ಬೆಳ್ಳಿಯ ಬೆಲೆ ಸುಮಾರು $69 USD ಪ್ರತಿ ಔನ್ಸ್‌ಗೆ ತಲುಪಿದ್ದು,(ಪ್ರಸ್ತುತ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹6,215 ರಿಂದ ₹6,250 ತಲುಪುತ್ತದೆ) ವರ್ಷದಲ್ಲಿ 132% ಏರಿಕೆಯಾಗಿದೆ. ಇದೇ ಸಮಯದಲ್ಲಿ ಚಿನ್ನದ ಬೆಲೆ $4,320-4,426 USD ಪ್ರತಿ ಔನ್ಸ್‌ಗೆ ಇದ್ದು, ಕೇವಲ 65-68% ಏರಿಕೆಯಾಗಿದೆ.ಈ ವ್ಯತ್ಯಾಸಕ್ಕೆ ಮುಖ್ಯ ಕಾರಣಗಳು ಏನು ಎಂಬುದು ತಿಳಿಯೋಣ..

ಬೆಳ್ಳಿಯ ಬೆಲೆ ಏರುತ್ತಿರುವ ಮುಖ್ಯ ಕಾರಣಗಳು

ಕೈಗಾರಿಕಾ ಬೇಡಿಕೆಯ ಉಲ್ಬಣ: ಸೋಲಾರ್ ಪ್ಯಾನಲ್‌ಗಳು, ಎಲೆಕ್ಟ್ರಾನಿಕ್ಸ್, AI ಟೆಕ್ನಾಲಜಿ, ಇಲೆಕ್ಟ್ರಿಕ್ ವೆಹಿಕಲ್‌ಗಳು ಮತ್ತು ಕ್ಲೀನ್ ಎನರ್ಜಿ ಸೆಕ್ಟರ್‌ಗಳಲ್ಲಿ ಬೆಳ್ಳಿಯ 50%ಕ್ಕಿಂತ ಹೆಚ್ಚು ಬಳಕೆ ಕೈಗಾರಿಕೆಗಳಲ್ಲಿ ಹೆಚ್ಚಾಗಿದೆ ಹೀಗಾಗಿ, 2025ರಲ್ಲಿ ಸೋಲಾರ್ ಉದ್ಯಮದ ಬೇಡಿಕೆಯೇ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಪೂರೈಕೆ ಕೊರತೆ: ಗಣಿಗಾರಿಕೆ ಉತ್ಪಾದನೆ ಕಡಿಮೆಯಾಗಿದ್ದು, 5ನೇ ವರ್ಷಕ್ಕೆ ಜಾಗತಿಕ ಪೂರೈಕೆ ಡೆಫಿಸಿಟ್ ಉಂಟಾಗಿದೆ. ಇನ್ವೆಂಟರಿಗಳು ಕಡಿಮೆಯಾಗಿದ್ದರಿಂದ ಬೆಲೆ ಏರಿಕೆಗೆ ಇನ್ನಷ್ಟು ಬೂಸ್ಟ್ ಸಿಕ್ಕಿದೆ
ಹೂಡಿಕೆದಾರರ ಆಸಕ್ತಿ: ಚಿನ್ನಕ್ಕಿಂತ ಕಡಿಮೆ ಬೆಲೆಯಿರುವ ಬೆಳ್ಳಿಯನ್ನು "ಪೂರ್ ಮ್ಯಾನ್ಸ್ ಗೋಲ್ಡ್" ಎಂದು ಕರೆಯುತ್ತಾರೆ. 2025ರಲ್ಲಿ ಭಾರತ, ಯುರೋಪ್ ಮತ್ತು ನಾರ್ತ್ ಅಮೆರಿಕಾದ ಹೂಡಿಕೆದಾರರು ಹೆಚ್ಚು ಖರೀದಿಸಿದ್ದಾರೆ. ದುರ್ಬಲ ಡಾಲರ್, ದರ ಕಡಿಮೆ ಮತ್ತು ಭೌಗೋಳಿಕ ಉದ್ವಿಗ್ನತೆಗಳು ಇದಕ್ಕೆ ಕಾರಣ
ಚಿನ್ನಕ್ಕಿಂತ ವ್ಯತ್ಯಾಸ: ಚಿನ್ನ ಮುಖ್ಯವಾಗಿ ಹೂಡಿಕೆ ಮತ್ತು ಆಭರಣಗಳಿಗೆ, ಆದರೆ ಬೆಳ್ಳಿಗೆ ಕೈಗಾರಿಕಾ ಬಳಕೆ ಹೆಚ್ಚು. ಹೀಗಾಗಿ ಬೆಳ್ಳಿಯ ಬೆಲೆ ಹೆಚ್ಚು ವೋಲಟೈಲ್ ಮತ್ತು ಇಂಡಸ್ಟ್ರಿಯಲ್ ಬೂಮ್‌ನಿಂದ ಪ್ರಭಾವಿತವಾಗಿದೆ.
ಯಾರು ಇಷ್ಟೊಂದು ಬೆಳ್ಳಿಯನ್ನು ಖರೀದಿಸುತ್ತಿದ್ದಾರೆ?
ಕೈಗಾರಿಕಾ ಕಂಪನಿಗಳು: ಸೋಲಾರ್ ಎನರ್ಜಿ ಕಂಪನಿಗಳು (ಉದಾ: ಚೀನಾ ಮತ್ತು USನ ಸೋಲಾರ್ ಫರ್ಮ್‌ಗಳು), ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರರ್‌ಗಳು (ಸ್ಮಾರ್ಟ್‌ಫೋನ್, ಚಿಪ್‌ಗಳು) ಮತ್ತು EV ಉದ್ಯಮ (ಟೆಸ್ಲಾ ಮುಂತಾದವು). ಇವರ ಬೇಡಿಕೆ ಜಾಗತಿಕ ಬೆಳ್ಳಿ ಬಳಕೆಯ 50%ಕ್ಕಿಂತ ಹೆಚ್ಚು
ಹೂಡಿಕೆದಾರರು ಮತ್ತು ರಿಟೇಲ್ ಬೈಯರ್‌ಗಳು: ಭಾರತದಲ್ಲಿ ಹೆಚ್ಚು ಡಿಮ್ಯಾಂಡ್ (ಆಭರಣ ಮತ್ತು ಹೂಡಿಕೆಗೆ). ಯುರೋಪ್ ಮತ್ತು ಅಮೆರಿಕಾದ ರಿಟೇಲ್ ಇನ್ವೆಸ್ಟರ್‌ಗಳು ETFಗಳ ಮೂಲಕ ಖರೀದಿಸುತ್ತಿದ್ದಾರೆ. ಸಿಲ್ವರ್ ಇನ್‌ಸ್ಟಿಟ್ಯೂಟ್ ವರದಿಯ ಪ್ರಕಾರ, ಫಿಸಿಕಲ್ ಸಿಲ್ವರ್ ಹೂಡಿಕೆ 3% ಏರಿಕೆಯಾಗಿದೆ
.
ಮೈನಿಂಗ್ ಮತ್ತು ಸ್ಟಾಕ್ ಕಂಪನಿಗಳು: ಫ್ರೆಸ್ನಿಲೋ PLC ಮುಂತಾದ ಪ್ರೈಮರಿ ಸಿಲ್ವರ್ ಪ್ರೊಡ್ಯೂಸರ್‌ಗಳು, ಆದರೆ ಅವರು ಮಾರಾಟಗಾರರು ಹೆಚ್ಚು. 2026ರಲ್ಲಿ ಬೆಲೆ ಇನ್ನಷ್ಟು ಏರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ,(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net