ಮುಂದುವರಿದು ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕ, ಅಂಬಾನಿ ಮತ್ತು ಅದಾನಿ ಹಸ್ತಕ್ಷೇಪ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಆರ್ಎಸ್ಎಸ್ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿರುವುದೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಭಾರತೀಯ ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ಒಂದೆಡೆ ಅಂಬಾನಿ ಮನೆಯ ಮದುವೆಯಲ್ಲಿ 1,000 ಕೋಟಿ ರೂಪಾಯಿ ಪೋಲಾಗುತ್ತಿರುವುದನ್ನು ಯುವಕರು ನೋಡುತ್ತಿದ್ದಾರೆ, ಇನ್ನೊಂದೆಡೆ ಸ್ವಂತ ಉದ್ಯಮ ಆರಂಭಿಸಲು ಅವರ ಬಳಿ ಹಣವಿಲ್ಲ. ಇದು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾದ ವಿಚಾರವಲ್ಲ. ಭಾರತದಲ್ಲಿ ತಮಗೆ ಯಾವುದೇ ಭವಿಷ್ಯವಿಲ್ಲ ಎಂದು ದೇಶದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ, ಅವರ ಈ ಆಕ್ರೋಶ ನ್ಯಾಯಯುತವಾಗಿದೆ.