ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಸರಿಸುಮಾರು ಶೇಕಡಾ 20 ರಷ್ಟು ಭಾಗ ಈ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಇದು ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್ ಮತ್ತು ಇರಾಕ್‌ನಂತಹ ದೇಶಗಳಿಗೆ ಜೀವನಾಡಿ. ಒಂದು ವೇಳೆ ಇರಾನ್ ಈ ಮಾರ್ಗವನ್ನು ದಿಗ್ಬಂಧನಗೊಳಿಸಿದರೆ, ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರುವುದಷ್ಟೇ ಅಲ್ಲ, ಭಾರತದಂತಹ ರಾಷ್ಟ್ರಗಳಲ್ಲಿ ಇಂಧನ ಬಿಕ್ಕಟ್ಟು ತಲೆದೋರಲಿದೆ.