ವಿಶ್ವದಲ್ಲೇ ಭಾರತದ ಔಷಧಿಗಳು ಯಾಕೆ ನಂಬರ್ ಒನ್? ಅಮೆರಿಕನ್ ಮಹಿಳೆ ಬಿಚ್ಚಿಟ್ಟ ಸತ್ಯಕ್ಕೆ ಇಂಟರ್ನೆಟ್ ಫುಲ್ ಫಿದಾ! US vs India

US vs India (ಚಿತ್ರ X)
US vs India (ಚಿತ್ರ X)
Published on
ಮುಂಬೈ: ಭಾರತದ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ವೆಚ್ಚಗಳು ವಿದೇಶಗಳಿಗೆ ಹೋಲಿಸಿದರೆ ಎಷ್ಟು ಕೈಗೆಟುಕುವಂತಿವೆ ಎಂಬುದನ್ನು ವಿದೇಶಿ ಪ್ರಜೆಯೊಬ್ಬರು ಸಾಕ್ಷ್ಯ ಸಮೇತ ಬಿಚ್ಚಿಟ್ಟರೆ ಹೇಗಿರುತ್ತೆ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಭಾರತದಲ್ಲಿ ವಾಸಿಸುತ್ತಿರುವ ಲಿಜ್ ಎಂಬ ಅಮೆರಿಕನ್ ಮಹಿಳೆಯೊಬ್ಬರು (US vs India) ಭಾರತ ಮತ್ತು ಅಮೆರಿಕದ ಆರೋಗ್ಯ ಸೇವಾ ವೆಚ್ಚವನ್ನು ಹೋಲಿಕೆ ಮಾಡಿ ಹಂಚಿಕೊಂಡಿರುವ ಮಾಹಿತಿ ಇದೀಗ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ.
ಇಂಡಿಯನ್ vs ಅಮೇರಿಕನ್ ಹೆಲ್ತ್‌ಕೇರ್ ಎಂಬ ಶೀರ್ಷಿಕೆಯಡಿ ಲಿಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಅಮೆರಿಕದ ದುಬಾರಿ ವೈದ್ಯಕೀಯ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಅಲ್ಲಿನ ಜನರನ್ನು ಆರೋಗ್ಯದ ಹೆಸರಿನಲ್ಲಿ ಹೇಗೆ 'ದರೋಡೆ' ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಔಷಧಿ ಬೆಲೆ; ಅಮೆರಿಕದಲ್ಲಿ 85,000ರೂ., ಭಾರತದಲ್ಲಿ 35 ರೂ.!

ವಿಡಿಯೋದಲ್ಲಿ ಮಾತನಾಡಿದ ಲಿಜ್​, ನನ್ನ ಚಿಕ್ಕಮ್ಮ ಒಂದು ರೀತಿಯ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅವರು 'ರೆವ್ಲಿಮಿಡ್' ಹೆಸರಿನ ಔಷಧಿಯ ಮಾತ್ರೆ ತೆಗೆದುಕೊಳ್ಳುತ್ತಾರೆ. ಅಮೆರಿಕದಲ್ಲಿ ಈ ಔಷಧಿಯ ಬೆಲೆ ಬರೋಬ್ಬರಿ 85,000 ರೂ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಕೇವಲ 35 ರೂಗಳಿಂದ 300 ರೂಗಳವರೆಗೆ ಲಭ್ಯವಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಭಾರತವು ತನ್ನ ಜನರಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಆದರೆ, ಅಮೆರಿಕದಲ್ಲಿ ಹಾಗಲ್ಲ. ಅಲ್ಲಿ ನಮ್ಮನ್ನು ದೋಚಲಾಗುತ್ತಿದೆ ಎಂದು ಆರೋಪಿಸಿದರು. ಅಮೆರಿಕದಂತಹ ಮುಂದುವರಿದ ದೇಶದಲ್ಲಿ ಹೆಲ್ತ್ ಇನ್ಶೂರೆನ್ಸ್ ಇದ್ದರೂ ಕೂಡ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಮಧ್ಯಮ ವರ್ಗದವರಿಗೆ ಕಡು ಕಷ್ಟದ ಕೆಲಸವಾಗಿದೆ. ಆದರೆ ಭಾರತದಲ್ಲಿ ಜೆನೆರಿಕ್ ಔಷಧಿಗಳ ಲಭ್ಯತೆಯಿಂದಾಗಿ ಸಾಮಾನ್ಯ ಜನರಿಗೂ ಜೀವ ರಕ್ಷಕ ಔಷಧಿಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ.
ಯುಎಸ್ ಹೆಲ್ತ್‌ಕೇರ್ ಬೆಲೆಗೆ ಅಮೆರಿಕನ್ ಮಹಿಳೆ ಆಕ್ರೋಶ!

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು ಭಾರತದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕ್ಯಾನ್ಸರ್ ಚಿಕಿತ್ಸೆ ಲಭ್ಯವಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಅವರಿಗೆ ನಾಚಿಕೆಯಾಗಬೇಕು. ನಾನು ಪ್ರತಿ ಬಾರಿ ಭಾರತಕ್ಕೆ ಹೋದಾಗ, ಯುರೋಪ್‌ಗಿಂತ ಅಗ್ಗವಾದ ಕೆಲವು ಜೆನೆರಿಕ್ ಔಷಧಿಗಳನ್ನು ಖರೀದಿಸಲು ನಾನು ಅವಕಾಶವನ್ನು ಪಡೆಯುತ್ತೇನೆ ಎಂದು ಕಾಮೆಂಟ್​ ಮಾಡಿದ್ದಾರೆ.

ಅಮೆರಿಕದ ಹೆಲ್ತ್‌ಕೇರ್ ಒಂದು ದೊಡ್ಡ ಸ್ಕ್ಯಾಮ್!

ಅಮೆರಿಕದ ದುಬಾರಿ ಆರೋಗ್ಯ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಿರುವವರಲ್ಲಿ ಲಿಜ್ ಒಬ್ಬರೇ ಅಲ್ಲ. ಕಳೆದ ತಿಂಗಳು ವಿಕ್ಟೋರಿಯಾ ಎಂಬ ಮತ್ತೊಬ್ಬ ಅಮೆರಿಕನ್ ಮಹಿಳೆ ಅಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಬಹಿರಂಗವಾಗಿ ‘ದರೋಡೆ’ ಎಂದು ಕರೆದಿದ್ದಾರೆ.
ಅಮೆರಿಕದಲ್ಲಿ ತಮ್ಮ ಇನ್ಶೂರೆನ್ಸ್ ಕಂಪನಿಯು ಅಗತ್ಯ ಔಷಧಿಗೆ ಹಣ ನೀಡಲು ನಿರಾಕರಿಸಿದಾಗ, ವಿಕ್ಟೋರಿಯಾಗೆ ಬರೋಬ್ಬರಿ 83,000 ರೂ. ಬಿಲ್​ ಬಂದಿತ್ತು. ಆದರೆ, ಅದೇ ಔಷಧಿಯನ್ನು ಅವರು ಭಾರತದ ಕಂಪನಿಯೊಂದರಿಂದ ನೇರವಾಗಿ ತರಿಸಿಕೊಂಡಾಗ ಅವರಿಗೆ ತಗುಲಿದ ವೆಚ್ಚ ಕೇವಲ ಸುಮಾರು 2,000 ರೂ. ಆಗಿತ್ತು.
ಅಮೆರಿಕದಲ್ಲಿ ಸಾಮಾನ್ಯ ಜನರನ್ನು ಸಂಪೂರ್ಣವಾಗಿ ಲೂಟಿ ಮಾಡಲಾಗುತ್ತಿದೆ. ನಾವು ಕೊಡುವ ಇಷ್ಟೊಂದು ದೊಡ್ಡ ಮೊತ್ತದ ಹಣ ಯಾರ ಜೇಬಿಗೆ ಹೋಗುತ್ತಿದೆ? ಎಂದು ವಿಕ್ಟೋರಿಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net