ಹೆಂಡತಿ-ಮಕ್ಕಳನ್ನು ಸಾಕಲಾಗದಿದ್ದರೆ ಮದುವೆ ಯಾಕೆ ಆಗ್ತೀರಾ? ಪತಿರಾಯನನ್ನು ತರಾಟೆ ತೆಗೆದುಕೊಂಡ ಅಲಹಾಬಾದ್​ ಹೈಕೋರ್ಟ್​! Allahabad High Court

ಜೀವನಾಂಶ ಪ್ರಕರಣದಲ್ಲಿ ಅಲಹಾಬಾದ್​ ಹೈಕೋರ್ಟ್​ ಮಹತ್ವದ ಹೇಳಿಕೆ
ಜೀವನಾಂಶ ಪ್ರಕರಣದಲ್ಲಿ ಅಲಹಾಬಾದ್​ ಹೈಕೋರ್ಟ್​ ಮಹತ್ವದ ಹೇಳಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಜೀವನಾಂಶ ಪ್ರಕರಣದಲ್ಲಿ ಅಲಹಾಬಾದ್​ ಹೈಕೋರ್ಟ್​ ಮಹತ್ವದ ಹೇಳಿಕೆ
  • ಹೆಂಡತಿ ಮಕ್ಕಳನ್ನು ಸಾಕಲಾರದ ನಿಮಗೆ ಮದುವೆ ಏಕೆ?
  • 4,000 ಜೀವನಾಂಶ ನೀಡಲು ನಿರಾಕರಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ನ್ಯಾಯಪೀಠ
ಅಲಹಾಬಾದ್​: ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದ ಗಂಡಸು ಮದುವೆಯಾಗುವ ಮೊದಲು ಇದರ ಬಗ್ಗೆ ವಿಚಾರ ಮಾಡಬೇಕು. ವಿಚ್ಛೇದನದ ಬಳಿಕ ನಾನು ಬಡವ, ಹೆಂಡತಿ, ಮಕ್ಕಳನ್ನು ಸಾಕಲು ಆರ್ಥಿವಾಗಿ ಸದೃಢನಾಗಿಲ್ಲ ಎಂದು ಹೇಳುವಂತಿಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ (Allahabad High Court) ಇತ್ತೀಚೆಗೆ ಹೇಳಿದೆ.

ಪತಿಯ ಅರ್ಜಿಯನ್ನು ವಜಾ ಮಾಡಿದ ನ್ಯಾಯಾಲಯ

ತೇಜ್ ಬಹಾದ್ದೂರ್​ ಮೌರ್ಯ ಎಂಬಾತ ನಾನು ಆರ್ಥಿಕವಾಗಿ ಬಡವನಿದ್ದೆನೆ. ನನ್ನ ಹೆಂಡತಿ ನನಗೆ ವಿಚ್ಚೇದನ ನೀಡಿದ್ದಾಳೆ. ಈಗ ಅವಳು ಮಾಸಿಕ 4,000 ರೂಪಾಯಿ ನಿರ್ವಹಣೆ ವೆಚ್ಚವಾಗಿ ನೀಡ ಬೇಕೆಂದು ಕೌಟುಂಬಿಕ ನ್ಯಾಯಾಲಯ ಹೇಳಿದೆ.
ಅದರೆ ನನ್ನಲ್ಲಿ ಅಷ್ಟು ಹಣ ನೀಡುವ ಸಾಮರ್ಥ್ಯವಿಲ್ಲ, ದಯಮಾಡಿ ಈ ನಿರ್ವಹಣಾ ವೆಚ್ಚ ನೀಡುವುದನ್ನು ರದ್ದು ಪಡಿಸಬೇಕೆಂದು ಮೌರ್ಯ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಅತುಲ್ ಶ್ರೀಧರನ್ ಮತ್ತು ವಿವೇಕ್ ಸರನ್ ಅವರ ನ್ಯಾಯಪೀಠ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.

ಕೌಟುಂಬಿಕ ನ್ಯಾಯಾಲಯ ಏನು ಹೇಳಿತ್ತು?

ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು, ಮೌರ್ಯ ಆತನ ಮಾಜಿ ಪತ್ನಿಗೆ ಮಾಸಿಕ 4,000 ರೂಪಾಯಿ ನಿರ್ವಹಣಾ ವೆಚ್ಚವನ್ನು ನೀಡಬೇಕಾಗಿ ಆದೇಶಿಸಿತ್ತು.
ಆದರೆ ನನ್ನ ಪತ್ನಿ ಈಗ ಬೇರೊಬ್ಬನೊಂದಿಗೆ ಜೀವನ ನಡೆಸುತ್ತಿದ್ದಾಳೆ. ಅವಳಿಕೆ ನನ್ಯಾಕೆ ನಿರ್ವಹಣಾ ವೆಚ್ಚವನ್ನು ನೀಡಬೇಕೆಂದು ಮೌರ್ಯ ಪ್ರಶ್ನಿಸಿದ್ದರು. ಆದರೆ ತಮ್ಮ ಹೇಳಿಕೆಗೆ ಪೂರಕವಾಗುವ ಸಾಕ್ಷ್ಯವನ್ನು ನ್ಯಾಯಪೀಠದ ಮುಂದೆ ಒಪ್ಪಿಸಲು ವಿಫಲವಾಗಿದ್ದರು.
ನಾನು ಅಷ್ಟೇನು ಓದಿಲ್ಲ, ನನಗೆ ನನ್ನ ಮನೆ ಮತ್ತು ಮಕ್ಕಳಿಕೆ ವಿದ್ಯಾಭ್ಯಾಸ ಕೊಡಿಸಲು ನಿರ್ವಹಣಾ ಮೊತ್ತ ಬೇಕೆಂದು ಮೌರ್ಯಾನ ಪತ್ನಿ ಕೌಟುಂಬಿಕ ನ್ಯಾಯಾಲಯವನ್ನು ಕೇಳಿಕೊಂಡಿದ್ದಳು. ಇದನ್ನು ಕೌಟುಂಬಿಕ ನ್ಯಾಯಾಲಯ ಸಹ ಒಪ್ಪಿಕೊಂಡಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ತೇಜ್​ ಬಹಾದ್ದೂರ್​ನಿಗೆ ಹಿನ್ನಡೆಯಾಗಿದ್ದು, ಹೆಂಡತಿ ಮಕ್ಕಳನ್ನು ಸಾಕಲಾರದ ನಿಮಗೆ ಮದುವೆ ಏಕೆ? ಎಂದು ನ್ಯಾಯಾಲಯ ಛೀಮಾರಿ ಹಾಕಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net