ಬೆಂಗಳೂರು: ನೀವು ಎಂದಾದರೂ ಕುದುರೆಯು ನಿಂತುಕೊಂಡೇ ಗಾಢ ನಿದ್ರೆಗೆ(Horse Sleep) ಜಾರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದೀರಾ? ಇದು ಕೇವಲ ಕುದುರೆಗಳಿಗೆ ಮಾತ್ರವಲ್ಲದೆ, ಜೀಬ್ರಾಗಳು, ಆನೆಗಳು ಮತ್ತು ಇತರೆ ಕೆಲವು ದೊಡ್ಡ ಗಾತ್ರದ ಪ್ರಾಣಿಗಳಲ್ಲಿ ಸಾಮಾನ್ಯ ನಿದ್ರೆಯ ವಿಧಾನವಾಗಿದೆ. ಆದರೆ, ಇಂತಹ ದೊಡ್ಡ ಪ್ರಾಣಿಗಳು ನಿಂತುಕೊಂಡೇ ನಿದ್ರಿಸುವುದು ಹೇಗೆ ಸಾಧ್ಯ? ಅವು ಕೆಳಗೆ ಬೀಳದೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ? ಈ ಕುರಿತು ಪ್ರಾಣಿವಿಜ್ಞಾನಿಗಳು ಮತ್ತು ಜೀವಶಾಸ್ತ್ರಜ್ಞರು ನಡೆಸಿದ ಸಂಶೋಧನೆಗಳು ರೋಚಕ ಸಂಗತಿಗಳನ್ನು ಹೊರಹಾಕಿವೆ.