16 ಉಪಗ್ರಹ ಹೊತ್ತೊಯ್ದ PSLV-C62 ಮಿಷನ್​ ವಿಫಲಕ್ಕೆ ಕಾರಣವೇನು? ಅಷ್ಟಕ್ಕೂ ಬಾಹ್ಯಾಕಾಶದಲ್ಲಿ ಆಗಿದ್ದೇನು?

PSLV-C62 ಮಿಷನ್​ ವಿಫಲ
PSLV-C62 ಮಿಷನ್​ ವಿಫಲ
Published on

ಪ್ರಮುಖ ಮುಖ್ಯಾಂಶಗಳು

  • PSLV-C62 ಉಡಾವಣೆ ವಿಫಲ
  • ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಪತ್ತೆ
  • ನಿಗದಿತ ಕಕ್ಷೆಯಿಂದ ಹೊರಬಂದ ಹಿನ್ನೆಲೆ ಫೇಲ್ಯೂರ್​
ನವದೆಹಲಿ: ಮಹತ್ತರ ಸಾಧನೆಯತ್ತ ದಾಪುಗಾಲಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ 2026ರ ಬಾಹ್ಯಾಕಾಶ ಕ್ಯಾಲೆಂಡರ್‌ನ ಮೊದಲ ಉಡಾವಣೆಯಲ್ಲಿ ವಿಫಲವಾಗಿದ್ದು ಸದ್ಯ ಭಾರತೀಯರಲ್ಲಿ ಬೇಸರ ಮೂಡಿಸಿದೆ.
ಇಂದು (ಜ.12) ಉಡಾವಣೆಯಾದ ಪಿಎಸ್​ಎಲ್​ವಿ-ಸಿ62 ರಾಕೆಟ್, "EOS-N1" ಉಪಗ್ರಹವನ್ನು ಇತರ 16 ದೇಶೀಯ ಮತ್ತು ವಿದೇಶಿ ಉಪಗ್ರಹಗಳೊಂದಿಗೆ ಉಡಾವಣೆಗೊಂಡಿತು. ಆದಾಗ್ಯೂ, ಉಡಾವಣೆಯ ಕೆಲವೇ ಸಮಯದಲ್ಲಿ, ರಾಕೆಟ್ ತನ್ನ ಪಥದಿಂದ ವಿಮುಖವಾಯಿತು. ಮೂರನೇ ಹಂತದಲ್ಲಿ ಗಂಭೀರ ಅಡಚಣೆ ಉಂಟಾದ ಹಿನ್ನೆಲೆ ಅದು ವಿಫಲವಾಯಿತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದರು.

ಮೂರನೇ ಹಂತದಲ್ಲಿ ವಿಫಲ

ರಾಕೆಟ್ ಆರಂಭದಲ್ಲಿ ನಿರೀಕ್ಷೆಗೆ ತಕ್ಕಂತೆ ಬಾಹ್ಯಾಕಾಶಕ್ಕೆ ಹಾರಿದರೂ, ಚೇಂಬರ್ ಒತ್ತಡದಲ್ಲಿನ ಅನಿರೀಕ್ಷಿತ ಇಳಿಕೆ ಮೂರನೇ ಹಂತ (PS3) ಅಗತ್ಯವಿರುವ ಒತ್ತಡವನ್ನು ಒದಗಿಸಲು ವಿಫಲವಾಯಿತು. ರಾಕೆಟ್ ತನ್ನ ಉದ್ದೇಶಿತ ಮಾರ್ಗದಿಂದ ವಿಮುಖವಾದ ಬೆನ್ನಲ್ಲೇ ಉಪಗ್ರಹಗಳನ್ನು ಕಕ್ಷೆಯಲ್ಲಿ ಇರಿಸಲು ಸಾಧ್ಯವಾಗಲಿಲ್ಲ ಎಂದರು. ಅಸಲಿಗೆ, ಇದು ಇಸ್ರೋ ಹಾಕಿಕೊಂಡಿದ್ದ ಲೆಕ್ಕಾಚಾರಗಳನ್ನು ಬದಲಿಸಿತು.
ಮುಖ್ಯ ಉಪಗ್ರಹವಾದ 'ಡಿಆರ್​ಡಿಓ'ದ ಕಾರ್ಯತಂತ್ರದ ವಿಚಕ್ಷಣ ಉಪಗ್ರಹ ಅನ್ವೇಶಾ ಜತೆಗೆ, ಇತರ 16 ಉಪಗ್ರಹಗಳು ಬಾಹ್ಯಾಕಾಶದಲ್ಲಿ ಕಣ್ಮರೆಯಾಗಿವೆ. ಮೂರನೇ ಹಂತದಲ್ಲಿ ಪಿಎಸ್‌ಎಲ್‌ವಿ ವಿಫಲವಾಗುತ್ತಿರುವುದು ಇದು ಸತತ ಎರಡನೇ ಬಾರಿ ಎಂಬುದು ಇಲ್ಲಿ ಗಮನಾರ್ಹ. ಒಟ್ಟು ನಾಲ್ಕು ಹಂತಗಳಲ್ಲಿ ಮೊದಲ ಎರಡು ಹಂತಗಳು ಉತ್ತಮವಾಗಿದ್ದರೂ, ಮೂರನೇ ಸ್ಟೇಜ್​ ತಲುಪುವ ವೇಳೆ ರಾಕೆಟ್ ನಿಗದಿತ ಮಾರ್ಗ ಬಿಟ್ಟು ಮತ್ತೊಂದು ದಿಕ್ಕಿನಲ್ಲಿ ಸಾಗಲಾರಂಭಿಸಿತು.
ಬಾಹ್ಯಾಕಾಶದಲ್ಲಿ ಗಂಟೆಗೆ 8000 ಕಿ.ಮೀ ವೇಗದಲ್ಲಿ ಸಣ್ಣ ಚಲನೆ ಕೂಡ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಛಿದ್ರಗೊಳಿಸಬಹುದು. ವರದಿ ಪ್ರಕಾರ, ಮೇ 2025ರಲ್ಲಿ ಪಿಎಸ್‌ಎಲ್‌ವಿ-ಸಿ 61 ಮಿಷನ್ ವಿಫಲವಾದದ್ದು ಇದೇ ರೀತಿಯೇ. ಸಾಕಷ್ಟು ಒತ್ತಡದ ಅಲಭ್ಯತೆಯ ಕಾರಣ, ರಾಕೆಟ್ ಕಕ್ಷೆಯನ್ನು ತಲುಪುವ ವೇಗವನ್ನು ಕಳೆದುಕೊಂಡು ವಿಫಲವಾಯಿತು. ಅಂತೆಯೇ, PSLV-C62 ಮಿಷನ್ ಕೂಡ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net