ಇನ್ನು, ತಾಯ್ತನದ ಬಗ್ಗೆಯೂ ಅನುಪಮಾ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ದೊಡ್ಡ ಕುಟುಂಬ ಇರಬೇಕು, 11 ಮಕ್ಕಳ ತಾಯಿ ಆಗಬೇಕು ಎಂಬ ಕನಸು ಕಂಡಿದ್ದೆ, ಆದರೆ ‘ನನಗೆ ಅನುಭವಗಳಿಂದ ಮಕ್ಕಳನ್ನು ಮಾಡಿಕೊಳ್ಳುವ ಆಸೆ ಇಲ್ಲ’ ಎಂದಿದ್ದಾರೆ. ‘ನನಗೆ 11 ಮಕ್ಕಳಾಗಬೇಕು ಎಂದು ಕನಸು ಕಾಣುತ್ತಿದ್ದೆ. ಆದರೆ ಈಗ ಮಕ್ಕಳೇ ಬೇಡ ಅನ್ನಿಸುತ್ತಿದೆ. ಹೆಣ್ಣಾಗಿ ಹುಟ್ಟಿದ್ದಕ್ಕೆ ನನಗೆ ತುಂಬಾ ಬೇಸರವಾಗಿತ್ತು. ನನ್ನ ಸಾಧನೆಗಳ ಬಗ್ಗೆಯೂ ಬೇಜಾರಾಗಿತ್ತು’ ಎಂದು ಅನುಪಮಾ ಹೇಳಿದ್ದಾರೆ.