ಈ ಬೃಹತ್ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ನಮ್ಮ ಭದ್ರತಾ ಸಂಸ್ಥೆಗಳು ದೇಶದಲ್ಲೇ ಮೊದಲ ಬಾರಿಗೆ 182 ಕೋಟಿ ರೂಪಾಯಿ ಮೌಲ್ಯದ ಜಿಹಾದಿ ಡ್ರಗ್ ಕ್ಯಾಪ್ಟಗನ್ ಅನ್ನು ವಶಪಡಿಸಿಕೊಂಡಿವೆ ಎಂದು ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆ. ಭಾರತವನ್ನು ಡ್ರಗ್ಸ್ ಸಾಗಾಣಿಕೆಯ ಮಾರ್ಗವಾಗಿ ಬಳಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಭಾರತಕ್ಕೆ ಬರುವ ಅಥವಾ ಇಲ್ಲಿಂದ ಹೊರಹೋಗುವ ಪ್ರತಿಯೊಂದು ಗ್ರಾಂ ಡ್ರಗ್ಸ್ ಮೇಲೂ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಎನ್‌ಸಿಬಿ ವೀರರನ್ನು ಅಭಿನಂದಿಸಿದ್ದಾರೆ.