ಬೆಂಗಳೂರಿನ ರೆಸ್ಟೋರೆಂಟ್‌ಗಳಿಂದ ಸ್ವಿಗ್ಗಿ, ಝೋಮ್ಯಾಟೋಗೆ ಬಹಿಷ್ಕಾರ?; ಆ.15ರ ಬಳಿಕ ಆನ್​ಲೈನ್​ನಲ್ಲಿ ಫುಡ್ ಸಿಗೋದು ಡೌಟು!.. Bengaluru

Swiggy boycott Bengaluru
Swiggy boycott Bengaluru
Published on
Swiggy boycott Bengaluru: ಅತಿಯಾದ ಕಮಿಷನ್‌ಗಳು, ರಿಯಾಯಿತಿ ಹಾಗೂ ಹಣ ಕಡಿತದಿಂದಾಗಿ ಹೋಟೆಲ್​​ಗಳು ಲಾಸ್​​ನಲ್ಲಿದ್ದು ಪಾರದರ್ಶಕ ವ್ಯವಹಾರ ಸೇರಿದಂತೆ ಕೆಲವೊಂದು ಬೇಡಿಕೆಯನ್ನು ಮುಂದಿಟ್ಟು ಆನ್​​ಲೈನ್​​​​​​​ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಸಂಸ್ಥೆಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಎಚ್ಚರಿಕೆ ಕೊಟ್ಟಿದೆ. ಆಗಸ್ಟ್ 15ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ಲಾಟ್‌ಫಾರ್ಮ್ ಅನ್ನು ಬಹಿಷ್ಕರಿಸುವುದಾಗಿ ವಾರ್ನ್​​ ಮಾಡಿದೆ.
ಇತ್ತೀಚೆಗೆ ವರ್ಕ್​ ಫ್ರಂ ಹೋಂ ಕೆಲಸ ಮಾಡುವವರು ಹಾಗೂ ರಾತ್ರಿ ಮನೆ ಸೇರುವವರು. ಪಾರ್ಟಿ ಮೂಡ್​ನಲ್ಲಿರುವವರು ಆನ್​ಲೈನ್​ನಲ್ಲಿ ಆಹಾರ ಖರೀದಿಸೋದು ಮಾಮೂಲು. ಆದರೆ, ಆನ್​ಲೈನ್​ ಅಪ್ಲಿಕೇಶನ್​ಗಳು ವಿಧಿಸುವ ರಿಯಾಯಿತಿಯಿಂದಾಗಿ ಹೋಟೆಲ್​ಗಳಿಗೆ ನಷ್ಟವಾಗುತ್ತಿದೆ. ಇದರಲ್ಲಿ ಪಾರದರ್ಶಕತೆ ಇರಬೇಕು ಎನ್ನುವುದು ರೆಸ್ಟೋರೆಂಟ್​ ಮಾಲೀಕರ ಬೇಡಿಕೆಯಾಗಿದೆ.

ರೆಸ್ಟೋರೆಂಟ್ ಮಾಲೀಕರ ಬೇಡಿಕೆ ಏನು?

  • ರೆಸ್ಟೋರೆಂಟ್‌ಗಳ ಒಪ್ಪಿಗೆಯಿಲ್ಲದೆ ಯಾವುದೇ ರಿಯಾಯಿತಿಗಳನ್ನು ನೀಡಬಾರದು.
  • ಜಾಹೀರಾತು ಶುಲ್ಕ ಮತ್ತು ಪಾವತಿ ಗೇಟ್‌ವೇ ಶುಲ್ಕಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು.
  • ಗ್ರಾಹಕರ ದೂರು ಬಂದ ತಕ್ಷಣವೇ ಹಣವನ್ನು ಅನಧಿಕೃತವಾಗಿ ಕಡಿತಗೊಳಿಸುವುದನ್ನು ನಿಲ್ಲಿಸಬೇಕು.
  • ಆಹಾರ ತಯಾರಾದ ಬಳಿಕ ಆರ್ಡರ್ ರದ್ದಾದರೆ, ಆ ನಷ್ಟವನ್ನು ರೆಸ್ಟೋರೆಂಟ್‌ಗಳು ಭರಿಸಬಾರದು.
  • ಎಲ್ಲಾ ಕಡಿತಗಳ ವಿವರವಾದ ಇತ್ಯರ್ಥ ವರದಿ ನೀಡಬೇಕು.
  • ಕಪಕ್ಷೀಯ ಒಪ್ಪಂದದ ನಿಯಮಗಳನ್ನು ಕೈಬಿಡಬೇಕುಪ್ರತಿ ರೆಸ್ಟೋರೆಂಟ್‌ಗೂ ಪ್ರತ್ಯೇಕ ರಿಲೇಶನ್‌ಶಿಪ್ ಮ್ಯಾನೇಜರ್ ಅನ್ನು ನೇಮಿಸಬೇಕು.

ರೆಸ್ಟೋರೆಂಟ್ ಮಾಲೀಕರ ಸಂಘ ಹೇಳೋದೇನು?

ಬೆಂಗಳೂರು ಹೋಟೆಲ್ ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ವಿಗ್ಗಿಯ ಅವೈಜ್ಞಾನಿಕ ಕಡಿತಗಳಿಂದ ಮಾಲೀಕರಿಗೆ ಭಾರೀ ನಷ್ಟವಾಗುತ್ತಿದೆ. 1 ಲಕ್ಷ ರೂ. ವ್ಯಾಪಾರವಾದರೆ, ಕಮಿಷನ್, ರಿಯಾಯಿತಿ ಮತ್ತು ಇತರೆ ಕಡಿತಗಳ ನಂತರ ರೆಸ್ಟೋರೆಂಟ್ ಕೈಗೆ ಕೇವಲ 40,000 ರೂ. ಮಾತ್ರ ಉಳಿಯುತ್ತಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಈ ಹಿನ್ನೆಲೆ ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಮತ್ತು ನ್ಯಾಷನಲ್ ರೆಸ್ಟೋರೆಂಟ್ & ಬಾರ್ ಅಸೋಸಿಯೇಷನ್ ಒಗ್ಗೂಡಿ ಆಗಸ್ಟ್​ 15ರವರೆಗೂ ನಮ್ಮ ಬೇಡಿಕೆ ಈಡೇರಿಸಲು ಗಡುವು ನೀಡಿದ್ದೇವೆ. ಅದಾದ ನಂತರ ನಮ್ಮ ಬೇಡಿಕೆ ಈಡೇರಿಸದೆ ಹೋದರೆ ಸ್ವಿಗ್ಗಿ, ಝೋಮ್ಯಾಟೋ ಪ್ಲಾಟ್‌ಫಾರ್ಮ್‌ನಿಂದಲೂ ಹೊರಗುಳಿಯುವುದಾಗಿ ಎಚ್ಚರಿಕೆ ನೀಡಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net