ದೆಹಲಿ ವಿಶ್ವವಿದ್ಯಾಲಯವನ್ನು ಮಿನಿ-ಇಂಡಿಯಾ ಎಂದು ಬಣ್ಣಿಸಿರುವ ಬಿಜೆಪಿ ಮೂಲಗಳು, ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ಹಿಂದೂ ಕಾಲೇಜ್, ಹನ್ಸ್‌ರಾಜ್ ಕಾಲೇಜ್ ಸೇರಿದಂತೆ ಉತ್ತರ ಕ್ಯಾಂಪಸ್‌ನ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಎಬಿವಿಪಿ ಸಾಧಿಸಿರುವ ಮುನ್ನಡೆಯನ್ನು ಎತ್ತಿ ತೋರಿಸಿವೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಯುಐ ಎಬಿವಿಪಿಯ ಸಾಂಪ್ರದಾಯಿಕ ಎದುರಾಳಿಯಾಗಿದ್ದು, ಈ ಹಿಂದೆ ಅಧಿಕಾರವನ್ನೂ ಹೊಂದಿದ್ದ ಎನ್‌ಎಸ್‌ಯುಐ, ಈಗ ಕೇಂದ್ರದ ಯಾವುದೇ ಸ್ಥಾನವನ್ನು ಗೆಲ್ಲಲು ವಿಫಲವಾಗಿರುವುದು, ಪರೀಕ್ಷೆಗಳು ಮತ್ತು ಉದ್ಯೋಗದ ಬಗ್ಗೆ ಆಕ್ರೋಶವಿದ್ದರೂ ದೆಹಲಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕಾಂಗ್ರೆಸ್ ಪರ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬಿಜೆಪಿ ವಾದಿಸುತ್ತಿದೆ.