ಈ ಭವಿಷ್ಯವಾಣಿ ನಿಜವಾದರೆ, ಕಳೆದ 2020 ರ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜೆಡಿಯುಗೆ ಇದು ಮಹತ್ವದ ತಿರುವಾಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ, ನಿತೀಶ್ರ ಪಕ್ಷವನ್ನು ಹಿಂದಿಕ್ಕಿ ಹೆಚ್ಚು ಸ್ಥಾನಗಳಿಸಿತ್ತು. 2020 ರಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದಾಗ್ಯೂ, ಜೆಡಿಯು 43ರಲ್ಲಿ ಗೆಲುವು ಸಾಧಿಸಿದ್ದರೆ, ಇತ್ತ ಬಿಜೆಪಿ 74 ಸ್ಥಾನ ಗಳಿಸುವ ಮೂಲಕ ಮೈತ್ರಿಕೂಟದಲ್ಲಿ ಮೇಲುಗೈ ಸಾಧಿಸಿತ್ತು.