ಇಡೀ ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭೆಯ ಚನಾವಣೆಯ ಫಲಿತಾಂಶ ( Bihar Assembly Election 2025 ) ಇಂದು ಪ್ರಕಟವಾಗಲಿದೆ. ಈ ಬಾರಿ ಬಿಹಾರದ ಗದ್ದುಗೆ ಏರೋದು ಯಾರು? ಯಾರಿಗೆ ಒಲಿಯುತ್ತೆ ಸಿಎಂ ಪಟ್ಟ? ಜೆಡಿಯು ನಾಯಕ ನಿತೀಶ್ ಕುಮಾರ್ ದಾಖಲೆಯ ಐದನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಾರಾ? ಅಥವಾ ಈ ಬಾರಿ ಸರ್ಕಾರ ಬದಲಾವಣೆಯಾಗಲಿದೆಯಾ? ಇಂದಿನ ಫಲಿತಾಂಶ ಈ ಪ್ರಶ್ನೆಗಳಿಗೆಲ್ಲ ಉತ್ತರ ನೀಡಲಿದೆ. ಮತಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ವಿಜಯವಾಣಿ ನಿಮ್ಮ ಮುಂದೆ ಇಡಲಿದೆ. ಫಲಿತಾಂಶದ ನಿಖರ ಮಾಹಿತಿಗಾಗಿ ವಿಜಯವಾಣಿ ಲೈವ್ ಅಪ್ಡೇಟ್ ಫಾಲೋ ಮಾಡ್ತಾ ಇರಿ.