CJP ಸಂಸ್ಥಾಪಕ ಅಭಿಜಿತ್ ಜತೆಗಿರುವ ನಿಗೂಢ ಯುವತಿ ಯಾರು? ಇಬ್ಬರ ನಡುವಿನ ಸಂಬಂಧವೇನು? ಕೊನೆಗೂ ಸಿಕ್ತು ಉತ್ತರ... Abhijeet Dipke

CJP ಸಂಸ್ಥಾಪಕ ಅಭಿಜಿತ್ ಜತೆಗಿರುವ ನಿಗೂಢ ಯುವತಿ ಯಾರು? ಇಬ್ಬರ ನಡುವಿನ ಸಂಬಂಧವೇನು? ಕೊನೆಗೂ ಸಿಕ್ತು ಉತ್ತರ... Abhijeet Dipke
CJP ಸಂಸ್ಥಾಪಕ ಅಭಿಜಿತ್ ಜತೆಗಿರುವ ನಿಗೂಢ ಯುವತಿ ಯಾರು? ಇಬ್ಬರ ನಡುವಿನ ಸಂಬಂಧವೇನು? ಕೊನೆಗೂ ಸಿಕ್ತು ಉತ್ತರ... Abhijeet Dipke
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಳೆಯ ಫೋಟೋ ವೈರಲ್
  • ಯುವತಿಯ ಜತೆಗಿನ ಆಪ್ತ ಚಿತ್ರದಿಂದ ನೆಟ್ಟಿಗರಲ್ಲಿ ಮೂಡಿದ ತೀವ್ರ ಕುತೂಹಲ
  • ಪೋಸ್ಟ್ ಹಂಚಿಕೊಂಡಿರುವ ಆರತಿ ಚಡ್ಡಾ ಎಎಪಿ ಸಾಮಾಜಿಕ ಜಾಲತಾಣ ತಂಡದ ಸದಸ್ಯೆ
  • ಇಬ್ಬರ ನಡುವಿನ ಒಡನಾಟ ಹಾಗೂ ಹಳೆಯ ಚಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಮುಖಂಡರಿಗೆ ಸಂಬಂಧಿಸಿದ ಹಳೆಯ ಫೋಟೋಗಳು ಮತ್ತು ವಿವಾದಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದೇ ರೀತಿ, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಅವರು ಯುವತಿಯೊಬ್ಬರೊಂದಿಗೆ ಅತ್ಯಂತ ಆಪ್ತವಾಗಿ ಕಾಣಿಸಿಕೊಂಡಿರುವ ಹಳೆಯ ಫೋಟೋವೊಂದು ಈಗ ನೆಟ್ಟಿಗರ ಗಮನ ಸೆಳೆದಿದೆ.
ಎಕ್ಸ್ ಜಾಲತಾಣದಲ್ಲಿ '@aartic02' ಎಂಬ ಬಳಕೆದಾರರು 2024ರಲ್ಲಿ ಹಂಚಿಕೊಂಡಿದ್ದ ಪೋಸ್ಟ್​ ಒಂದರಲ್ಲಿ "ಜನ್ಮದಿನದ ಶುಭಾಶಯಗಳು ಸ್ನೇಹಿತ ಅಭಿಜಿತ್ ದೀಪ್ಕೆ, ತೆರೆಯ ಹಿಂದೆ ಶ್ರಮಿಸಿ ಎಎಪಿ (AAP) ಸಾಮಾಜಿಕ ಜಾಲತಾಣದ ಬೆಳವಣಿಗೆಗೆ ಶಕ್ತಿ ತುಂಬಿದವರು" ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿತ್ತು. ಈ ಪೋಸ್ಟ್​ ಅನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದರು. ಈ ಹಳೆಯ ಚಿತ್ರದಲ್ಲಿ ಅಭಿಜೀತ್​ ಜತೆ ಇರುವ ಆ ಯುವತಿ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋದ ಹಿಂದೆ ಇರುವ ಯುವತಿಯ ಬಗ್ಗೆ ಮತ್ತಷ್ಟು ಕುತೂಹಲಕಾರಿ ಮಾಹಿತಿಗಳು ಹೊರಬಂದಿವೆ. ಅದೇನೆಂದರೆ, ಈ ಹಿಂದೆ 2021ರಲ್ಲಿಯೂ ಇದೇ ಬಳಕೆದಾರರು ಅಭಿಜಿತ್ ದೀಪ್ಕೆ ಹಾಗೂ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು, "ಹುಟ್ಟುಹಬ್ಬದ ಶುಭಾಶಯಗಳು ಯಂಗ್ ಅಂಡ್ ಡೈನಾಮಿಕ್ ಅಭಿಜಿತ್, ನಿಮ್ಮ ಉಪಸ್ಥಿತಿಯು ಎಎಪಿ ಸಾಮಾಜಿಕ ಜಾಲತಾಣಕ್ಕೆ ಹೊಸ ಹುರುಪು ನೀಡಿದೆ" ಎಂದು ಬರೆದುಕೊಂಡಿದ್ದರು.

ಈ ಪೋಸ್ಟ್‌ಗೆ ಅಭಿಜಿತ್ ದೀಪ್ಕೆ "ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು" ಎಂದು ಉತ್ತರಿಸಿದ್ದರು. ಅದಕ್ಕೆ ಆ ಯುವತಿ ಹಾರ್ಟ್ ಎಮೋಜಿಯೊಂದಿಗೆ "ಲವ್ ಯೂ" ಎಂದು ಪ್ರತಿಕ್ರಿಯೆ ನೀಡಿದ್ದರು. ಇವರ ನಡುವೆ ಪ್ರಣಯ ಸಂಬಂಧವಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಖಚಿತತೆ ಇಲ್ಲದಿದ್ದರೂ, ಈ ಫೋಟೋಗಳು ಮತ್ತು ಚಾಟ್‌ಗಳು ಇಬ್ಬರ ನಡುವಿನ ಅತ್ಯಾಪ್ತ ಹಾಗೂ ಗಢವಾದ ಒಡನಾಟವನ್ನು ಎತ್ತಿ ತೋರಿಸುತ್ತವೆ.

ಸಂಬಂಧಿತ ಯುವತಿಯ ಬಯೋದಲ್ಲಿ ಆಕೆಯ ವೃತ್ತಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲದಿದ್ದರೂ, ಪಂಜಾಬ್ ವಿಧಾನಸಭಾ ಚುನಾವಣೆಯ ನಂತರ ಎನ್‌ಡಿಟಿವಿ ನಡೆಸಿದ್ದ ಹಳೆಯ ಸಂದರ್ಶನವೊಂದರ ಮೂಲಕ ಆಕೆಯ ಗುರುತು ಆರತಿ ಚಡ್ಡಾ (Aarti Chadha) ಎಂದು ಖಚಿತಗೊಂಡಿದೆ. ಅಲ್ಲದೆ, ಅವರು ಆಮ್ ಆದ್ಮಿ ಪಕ್ಷದ (AAP) ಅಧಿಕೃತ ಸಾಮಾಜಿಕ ಜಾಲತಾಣ ತಂಡದ ಪ್ರಮುಖ ಸದಸ್ಯೆಯಾಗಿದ್ದಾರೆ ಎಂಬುದು ಆ ಸಂದರ್ಶನದಿಂದ ತಿಳಿದುಬಂದಿದೆ.

ಇನ್ನು ಅಭಿಜಿತ್ ದೀಪ್ಕೆ ಅವರ ರಾಜಕೀಯ ಹಿನ್ನೆಲೆ ನೋಡುವುದಾದರೆ, ಅವರು 2020 ರಿಂದ 2023ರವರೆಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಚುನಾವಣಾ ಪ್ರಚಾರ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದರು. ವಿಶೇಷವಾಗಿ 2020ರಲ್ಲಿ ಅವರು ಮೀಮ್-ಆಧಾರಿತ ಡಿಜಿಟಲ್ ಪ್ರಚಾರದ ಮೂಲಕ ಪಕ್ಷದ ರಾಜಕೀಯ ಸಂದೇಶಗಳನ್ನು ಯುವ ಮತದಾರರಿಗೆ ತಲುಪಿಸುವಲ್ಲಿ ಮತ್ತು ಪಕ್ಷದ ಡಿಜಿಟಲ್ ಅಸ್ತಿತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು, (

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net