ನವದೆಹಲಿ: ಪ್ರಸ್ತುತ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಜಗತ್ತಿನ ಅನೇಕ ಪ್ರಮುಖ ನಾಯಕರು, ಟೆಕ್ ದೈತ್ಯ ಸಂಸ್ಥೆಗಳ ಸಿಇಒಗಳು ಮತ್ತು ಗಣ್ಯರು ಭಾಗಿಯಾಗಿದ್ದಾರೆ. ಈ ಶೃಂಗಸಭೆಯಲ್ಲಿ 8 ವರ್ಷದ ರಣವೀರ್ ಸಚ್‌ದೇವ್ ಎಂಬ ಪುಟ್ಟ ಪೋರನ ಎಲ್ಲರ ಗಮನ ಸೆಳೆದಿದ್ದು, ಈತನ ಸಾಧನೆ ಮತ್ತು ಗುರಿಯನ್ನು ನೋಡಿ ಟೆಕ್ ದೈತ್ಯರೇ ಒಂದು ನಿಮಿಷ ಹುಬ್ಬೇರಿಸಿದ್ದಾರೆ.