ಯಾರೀ ರಾಜ ಮುತ್ತುಪಾಂಡಿ? ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ತಮಿಳುನಾಡಿನ ಸಿಂಹ

ಕಾಮನ್‌ವೆಲ್ತ್‌ ಕ್ರೀಡಾಕೂಟ 2026
ಕಾಮನ್‌ವೆಲ್ತ್‌ ಕ್ರೀಡಾಕೂಟ 2026
Published on

ಪ್ರಮುಖ ಮುಖ್ಯಾಂಶಗಳು

  • ಸ್ಕಾಟ್​ಲ್ಯಾಂಡ್​ನ ಗ್ಲಾಸ್​ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟ 2026
  • ಪುರುಷರ 65 ಕೆಜಿ ವಿಭಾಗದಲ್ಲಿ ತಮಿಳುನಾಡಿನ ಕ್ರೀಡಾಪಟು ರಾಜ ಮುತ್ತುಪಾಂಡಿಗೆ ಬೆಳ್ಳಿ
ಸ್ಕಾಟ್​ಲ್ಯಾಂಡ್: ಪ್ರಸಕ್ತ, ಗ್ಲಾಸ್​ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟ 2026ರ 4ನೇ ದಿನದಂದು ಪದಕದ ಬೇಟೆಯಾಡಿದ ಭಾರತದ ವೇಟ್‌ಲಿಫ್ಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಮಹಿಳೆಯರ 48 ಕೆಜಿ ವೇಟ್​ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನ ಗೆದ್ದರೆ, ಪುರುಷರ 65 ಕೆಜಿ ವಿಭಾಗದಲ್ಲಿ ತಮಿಳುನಾಡಿನ ಕ್ರೀಡಾಪಟು ರಾಜ ಮುತ್ತುಪಾಂಡಿ ಮತ್ತು ಋಷಿಕಾಂತ ಸಿಂಗ್ ಚನಂಬಮ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟು ದೇಶದ ಕೀರ್ತಿಯನ್ನು ದುಪ್ಪಟ್ಟು ಮಾಡಿದರು. ಸ್ನ್ಯಾಚ್ 126 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 160 ಕೆಜಿ ಸೇರಿ ಒಟ್ಟು 286 ಕೆಜಿ ಭಾರ ಎತ್ತುವ ಮೂಲಕ ರಾಜ ಮುತ್ತುಪಾಂಡಿ ಈ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

ಒಂದೇ ದಿನ ಭಾರತಕ್ಕೆ 3 ಪದಕ

  1. ಮೀರಾಬಾಯಿ ಚಾನು: ಚಿನ್ನದ ಪದಕ
  2. ಋಷಿಕಾಂತ ಸಿಂಗ್ ಚನಂಬಮ್: ಬೆಳ್ಳಿ ಪದಕ
  3. ರಾಜ ಮುತ್ತುಪಾಂಡಿ: ಬೆಳ್ಳಿ ಪದಕ
ಈ ಮೂವರ ಐತಿಹಾಸಿಕ ಗೆಲುವಿನೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 4ಕ್ಕೆ (1 ಚಿನ್ನ, 2 ಬೆಳ್ಳಿ, 1 ಕಂಚು) ಏರಿದೆ.
ಬೆಳ್ಳಿ ಪದಕ ಗೆದ್ದ ತಮಿಳುನಾಡಿನ 27 ವರ್ಷದ ರಾಜ ಮುತ್ತುಪಾಂಡಿ ಅವರ ಈ ಐತಿಹಾಸಿಕ ಸಾಧನೆಯ ಹಿಂದೆ ಒಂದು ನೋವಿನ ಸಂಗತಿಯೂ ಅಡಗಿದೆ. 2019ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ತನ್ನ ಬಲ ಮೊಣಕೈಗೆ ಗಂಭೀರವಾದ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜ, ವೃತ್ತಿಜೀವನವೇ ಮುಗಿಯಿತು ಎನ್ನುವ ಹಂತದಲ್ಲಿದ್ದರು. ಆದರೆ, ಛಲ ಬಿಡದೆ, ದೃತಿಗೆಡದೆ 2021ರ ರಾಷ್ಟ್ರೀಯ ಚಾಂಪಿಯನ್‌ಷಿಪ್​ನಲ್ಲಿ ಭಾಗವಹಿಸುವ ಮೂಲಕ ಭರ್ಜರಿ ರೀ-ಎಂಟ್ರಿ ಕೊಟ್ಟರು.
2025ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 296 ಕೆಜಿ ಎತ್ತಿ ಬೆಳ್ಳಿ ಪದಕ ಗೆದ್ದು ಮಿಂಚಿದ್ದರು. ನಾರ್ವೆಯ ಫೋರ್ಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 299 ಕೆಜಿ ಭಾರ ಎತ್ತಿ, 9ನೇ ಸ್ಥಾನ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲೂ ಸೈ ಎನಿಸಿಕೊಂಡಿದ್ದರು ರಾಜ. ಇನ್ನು, 2026ರ ಸೀನಿಯರ್ ನ್ಯಾಷನಲ್ಸ್‌ನಲ್ಲಿ 302 ಕೆಜಿ ಲಿಫ್ಟ್​ ಮಾಡುವ ಮೂಲಕ ತಮ್ಮ ವೃತ್ತಿಜೀವನದ ಶ್ರೇಷ್ಠ ಸಾಧನೆಯೊಂದಿಗೆ ರಾಷ್ಟ್ರೀಯ ಪಟ್ಟದಲ್ಲಿ ಗುರುತಿಸಿಕೊಂಡರು. ಈ ವರ್ಷದ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಮತ್ತೊಂದು ಪಟ್ಟಕ್ಕೆ ಅರ್ಹರಾಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net