ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಆಯೋಮಯ. ಶರವೇಗದಲ್ಲಿ ಸಾಗುತ್ತಿರುವ ಇಂಟರ್ನೆಟ್ ಲೋಕದಲ್ಲಿ ಎಲ್ಲರೂ ಸಾಗುವುದು ಕಷ್ಟಸಾಧ್ಯವಾದರೂ ಮುಂದೋಗಬೇಕಿರುವುದು ಅನಿವಾರ್ಯ. ಸಾಕಷ್ಟು ಆನ್ಲೈನ್ ಗೋಲ್ಮಾಲ್, ವಂಚನೆ ಪ್ರಕರಣಗಳು ನಡೆಯುತ್ತಿರುವ ಮಧ್ಯೆ ಇಲ್ಲೊಬ್ಬ 19 ವರ್ಷದ ಯುವಕ, ತನ್ನ ಬುದ್ಧಿವಂತಿಕೆ, ಜಾಣ್ಮೆಯ ಕೆಲಸದಿಂದ ಐಐಟಿ ಕಾನ್ಪುರದಲ್ಲಿ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾನೆ.