ಪುದುಚೇರಿ: ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವು ನಾಯಕರು ತಮ್ಮ ಪಕ್ಷಕ್ಕಿಂತಲೂ ದೊಡ್ಡವರಾಗಿ ಬೆಳೆಯುತ್ತಾರೆ. ಅಂತಹವರ ಸಾಲಿನಲ್ಲಿ ನಿಲ್ಲುವ ಅಪರೂಪದ ವ್ಯಕ್ತಿತ್ವ ಎನ್. ರಂಗಸ್ವಾಮಿ(N Rangaswamy). ಪುದುಚೇರಿ ಎಂಬ ಪುಟ್ಟ ಕೇಂದ್ರಾಡಳಿತ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಇವರ ಕಥೆ ಸೋಲು, ಗೆಲುವು, ಅವಮಾನ ಮತ್ತು ಅಪ್ರತಿಮ ಮರುಜನ್ಮದ ರೋಚಕ ಪಯಣವಾಗಿದೆ. ಇದೀಗ ಮತ್ತೊಮ್ಮೆ(5ನೇ ಬಾರಿಗೆ) ಸಿಎಂ ಗಾದಿಯತ್ತ ಮುಖ ಮಾಡಿದ್ದಾರೆ.