ಹರೀಶ್ ರಾಣಾ ಉತ್ತರ ಪ್ರದೇಶದ ಗಾಜಿಯಾಬಾದ್ನ ನಿವಾಸಿ. ಬಹಳ ಬುದ್ಧಿವಂತ ಹಾಗೂ ಚೂಟಿಯಾಗಿದ್ದ ರಾಣಾ, ಹೆತ್ತವರಿಗೆ ಮತ್ತು ಸ್ಥಳೀಯರ ಅಚ್ಚುಮೆಚ್ಚಿನ ಹುಡುಗ. 2013ರಲ್ಲಿ ಪಂಜಾಬ್ನ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದ ಹರೀಶ್, ಅಲ್ಲಿಯೇ ಇದ್ದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ. ಈ ವೇಳೆ, ಒಂದು ದಿನ ಕಟ್ಟಡದ ನಾಲ್ಕನೇ ಮಹಡಿಯಿಂದ ಹರೀಶ್ ಆಯಾತಪ್ಪಿ ಕೆಳಗೆ ಬಿದ್ದರು. ತೀವ್ರ ರಕ್ತಸ್ರಾವವಾಗಿ ತಲೆಗೆ ಗಂಭೀರ ಪೆಟ್ಟು ಬಿದ್ದು, ಕೋಮಾಕ್ಕೆ ಜಾರಿದ್ದರು. ಅಂದಿನಿಂದ ಇಂದಿನವರೆಗೂ ದೇಹದಲ್ಲಿ ಉಸಿರಿದ್ದರೂ ಯಾವುದೇ ಚಲನವಲನ ಇಲ್ಲದಿರುವುದು ಪೋಷಕರ ಕಣ್ಣೀರಿಗೆ ಕಾರಣವಾಯಿತು.