ಅಂದಹಾಗೆ, ಈ ಸಾಧಕಿಯ ಹೆಸರು ಚಾಂದನಿ ವಿಶ್ವಕರ್ಮ. ವಯಸ್ಸು 18. ಭೋಪಾಲ್‌ನ ಭೀಮ್ ನಗರ ಎಂಬ ಕೊಳಚೆ ಪ್ರದೇಶದ ಹುಡುಗಿ ಈಕೆ. 2026ರ ಮಧ್ಯಪ್ರದೇಶ ಮಂಡಳಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಈಕೆ ಪಡೆದ ಅಂಕಗಳನ್ನು ತಿಳಿದರೆ, ನೀವು ಹುಬ್ಬೇರಿಸದೇ ಇರಲಾರಿರಿ. ತೀವ್ರ ಬಡತನದ ನಡುವೆಯೂ ಕಷ್ಟಪಟ್ಟು ಅಧ್ಯಯನ ಮಾಡಿ, ಯಶಸ್ವಿಯಾದ ಈಕೆಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.