ಬೆಂಗಳೂರು: ನಾವು ಆಸ್ಪತ್ರೆಗೆ ಹೋದಾಗ ವೈದ್ಯರು ಬಿಳಿ ಕೋಟ್‌ನಲ್ಲಿ ಮಿಂಚುತ್ತಿದ್ದರೆ, ನ್ಯಾಯಾಲಯದಲ್ಲಿ ವಕೀಲರು ಕಪ್ಪು ಕೋಟ್‌ನಲ್ಲಿ ಗಂಭೀರವಾಗಿ ಕಾಣಿಸುತ್ತಾರೆ. ಇದು ಕೇವಲ ಫ್ಯಾಷನ್ ಅಥವಾ ಸಮವಸ್ತ್ರವಲ್ಲ; ಇದರ ಹಿಂದೆ ಶತಮಾನಗಳ ಇತಿಹಾಸ, ವಿಜ್ಞಾನ ಮತ್ತು ಸಾಂಕೇತಿಕ ಅರ್ಥಗಳಿವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಮಾಹಿತಿ ಭಾರಿ ವೈರಲ್ ಆಗುತ್ತಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.