ಮಹಾ ಶಿವರಾತ್ರಿ ಹಿಂದೂ ಧರ್ಮದಲ್ಲಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಆಚರಿಸಲಾಗುತ್ತದೆ. ಶಿವಪುರಾಣದ ಪ್ರಕಾರ, ಈ ದಿನದಂದು ಶಿವ-ಪಾರ್ವತಿ ವಿವಾಹವಾಯಿತು. ಜೊತೆಗೆ ಸಮುದ್ರ ಮಂಥನದಲ್ಲಿ ಹಾಲಾಹಲ ವಿಷವನ್ನು ಶಿವನು ಕುಡಿದು ಜಗತ್ತನ್ನು ರಕ್ಷಿಸಿದನು. ಹಾಗಾಗಿ ಈ ಹಬ್ಬದಂದು ಭಕ್ತರು ದಿನವಿಡೀ ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ, ಶಿವಲಿಂಗಕ್ಕೆ ಅಭಿಷೇಕ, ಬಿಲ್ವಪತ್ರ ಅರ್ಪಣೆ ಮಾಡಿ ಓಂ ನಮಃ ಶಿವಾಯ ಎಂದು ಜಪಿಸುತ್ತಾರೆ. ಇದರಿಂದ ಪಾಪಗಳು ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ (ಏಜೆನ್ಸೀಸ್).