_1766254655583.webp?w=480&auto=format%2Ccompress&fit=max)
_1766254655583.webp?w=480&auto=format%2Ccompress&fit=max)
ನವದೆಹಲಿ: ವಾಟ್ಸ್ಆಪ್ಅನ್ನು ಕಂಪ್ಯೂಟರ್ನಲ್ಲಿ ಬಳಸುವ ವೇಳೆ ಸೈಬರ್ ದಾಳಿಕೋರರು ಸಂದೇಶಗಳು, ಫೊಟೋಗಳು, ವಿಡಿಯೋಗಳನ್ನು ವೀಕ್ಷಿಸಬಹುದು ಮತ್ತು ಖಾತೆಯ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಬಹುದು ಎಂದು ಭಾರತೀಯ ಸೈಬರ್ ಭದ್ರತಾ ಏಜೆನ್ಸಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ವಾಟ್ಸ್ಆಪ್ನ ಡಿವೈಸ್ ಲಿಂಕಿಂಗ್ ವೈಶಿಷ್ಟ್ಯದಲ್ಲಿರುವ ಸಮಸ್ಯೆ ಕುರಿತು ಎಚ್ಚರಿಕೆ ನೀಡಿದೆ.
ಸೈಬರ್ ವಂಚಕರು ವಾಟ್ಸ್ಆಪ್ನ ಡಿವೈಸ್ ಲಿಂಕಿಂಗ್ ವೈಶಿಷ್ಟ್ಯವನ್ನು ಬಳಸಿಕೊಂಡು ವಾಟ್ಸ್ಆಪ್ ಖಾತೆಗಳನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಡಿವೈಸ್ ಲಿಂಕಿಂಗ್ ವೇಳೆ ದೃಢೀಕರಣದ ಅಗತ್ಯವಿಲ್ಲದೆ ಪೇರಿಂಗ್ ಕೋಡ್ಗಳನ್ನು ಬಳಸಿಕೊಂಡು ವಾಟ್ಸ್ಆಪ್ ಖಾತೆಗಳನ್ನು ಹೈಜಾಕ್ ಮಾಡಬಹುದು. ಹೊಸದಾಗಿ ಗುರುತಿಸಲಾಗಿರುವ ಘೋಸ್ಟ್ ಪೇರಿಂಗ್ ಎಂಬ ಸೈಬರ್ ವಂಚನೆ ವಿಧಾನ ಸೈಬರ್ ವಂಚಕರಿಗೆ ಯಾವುದೇ ಪಾಸ್ವರ್ಡ್ ಅಥವಾ ಸಿಮ್ ಅಗತ್ಯವಿಲ್ಲದೆ ವಾಟ್ಸ್ಆಪ್ ಖಾತೆಯ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಸಿಇಆರ್ಟಿ-ಇನ್ ತಿಳಿಸಿದೆ.
ಸಾಮಾನ್ಯವಾಗಿ ಸೈಬರ್ ದಾಳಿ ಸಂದೇಶದೊಂದಿಗೆ ಆರಂಭವಾಗುತ್ತದೆ. ಯಾರಾದರೂ ಈ ನಕಲಿ ಲಿಂಕ್ ಕ್ಲಿಕ್ಕಿಸಿದರೆ ದಾಳಿಕೋರರು ವಾಟ್ಸ್ಆಪ್ ಡಿವೈಸ್ ಲಿಂಕಿಂಗ್ ವೈಶಿಷ್ಟವನ್ನು ಬಳಸಿಕೊಂಡು ಖಾತೆಯ ಬಳಕೆದಾರನ ಅರಿವಿಗೆ ಬರದಂತೆ ವಾಟ್ಸ್ಆಪ್ ಖಾತೆಯ ನಿಯಂತ್ರಣ ಪಡೆದುಕೊಳ್ಳುತ್ತಾರೆ. ದಾಳಿಕೋರರು ತಮ್ಮ ಸಾಧನವನ್ನು ಲಿಂಕ್ ಮಾಡಿದ ಬಳಿಕ ವಾಟ್ಸ್ಆಪ್ ಬಳಕೆದಾರ ವೆಬ್ನಲ್ಲಿ ಪ್ರವೇಶ ಪಡೆದಾಗ ಅವರಿಗೂ ಪ್ರವೇಶ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುವಾಗ ಎಚ್ಚರದಿಂದ ಇರಬೇಕು ಎಂದು ಸಿಇಆರ್ಟಿ-ಇನ್ ಎಚ್ಚರಿಕೆ ನೀಡಿದೆ.