ಪತ್ನಿಯ ಅಹವಾಲು ಕೇಳದೆ ವಿಚ್ಛೇದನ ನೀಡಿದ ನಾಸಿಕ್ ಕೋರ್ಟ್; ತೀರ್ಪು ವಜಾಗೊಳಿಸಿದ ಹೈಕೋರ್ಟ್! WhatsApp Evidence

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಾಟ್ಸಾಪ್ ಮತ್ತು ಎಸ್‌ಎಂಎಸ್ ಸಂದೇಶಗಳ ಆಧಾರದ ಮೇಲೆ ಕೌಟುಂಬಿಕ ನ್ಯಾಯಾಲಯ ವಿಚ್ಛೇಧನ ನೀಡುವಂತಿಲ್ಲ
  • ನಾಸಿಕ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ
  • ಮಹಿಳೆ ಕ್ರೂರವಾಗಿ ವರ್ತಿಸಿದ್ದಾಳೋ ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸುವ ಮೊದಲು ಆಕೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು
ಮುಂಬೈ: ವಾಟ್ಸಾಪ್ ಮತ್ತು ಎಸ್‌ಎಂಎಸ್ ಸಂದೇಶಗಳ (WhatsApp Evidence) ಆಧಾರದ ಮೇಲೆ ನಾಸಿಕ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದ್ದು, ಮಹಿಳೆಯು ತನ್ನ ಪತಿಯೊಂದಿಗೆ ಕ್ರೂರವಾಗಿ ವರ್ತಿಸಿದ್ದಾಳೋ ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸುವ ಮೊದಲು ಆಕೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು ಎಂದು ತೀರ್ಪು ನೀಡಿದೆ.

ಘಟನೆ ಏನು?

ಪತಿಯು ತನ್ನ ಪತ್ನಿಯ ವಿರುದ್ಧ "ಕ್ರೌರ್ಯ" ಮತ್ತು ಮಾನಸಿಕ ಕಿರುಕುಳದ ಆರೋಪದ ಹೊರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪೂರಕವಾಗಿ ಪತ್ನಿ ಕಳುಹಿಸಿದ್ದ ಎನ್ನಲಾದ ಕೆಲವು ವಾಟ್ಸಾಪ್ ಸಂದೇಶಗಳು ಮತ್ತು ಎಸ್‌ಎಂಎಸ್ ಗಳನ್ನು ಸಾಕ್ಷಿಯಾಗಿ ಒದಗಿಸಿದ್ದರು. ಈ ವೇಳೆ ನಾಸಿಕ್ ಕೌಟುಂಬಿಕ ನ್ಯಾಯಾಲಯವು ಸಂದೇಶಗಳನ್ನು ಆಧಾರವಾಗಿಟ್ಟುಕೊಂಡು, ಆಕೆಯ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪತ್ನಿಯು ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತನಗೆ ತನ್ನ ವಾದವನ್ನು ಸ್ಪಷ್ಟಪಡಿಸಲು ಅಥವಾ ಸಂದೇಶಗಳನ್ನು ವಿವರಿಸಲು ಅವಕಾಶ ನೀಡಿಲ್ಲ ಎಂದು ದೂರಿದ್ದರು.

ಪತ್ನಿಯ ಮಾತನ್ನು ಆಲಿಸಬೇಕು; ಹೈಕೋರ್ಟ್ ಸೂಚನೆ

ಆದಾಗ್ಯೂ, ಬಾಂಬೆ ಹೈಕೋರ್ಟ್​ ಈ ತೀರ್ಪನ್ನು ಒಪ್ಪಲಿಲ್ಲ. ಬದಲಿಗೆ ಸಂದೇಶಗಳನ್ನು ವಿವರಿಸಲು ಅಥವಾ ಪ್ರಶ್ನಿಸಲು ಮಹಿಳೆಗೆ ಅವಕಾಶ ನೀಡಿಲ್ಲ. ವಾಟ್ಸಾಪ್​ ಸಂದೇಶಗಳನ್ನು ಆಧರಿಸಿ ಕ್ರೌರ್ಯವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಹಾಗಾಗಿ ಪತ್ನಿಯ ವಿಚಾರಣೆ ಮತ್ತು ಸಾಕ್ಷಿಗಳನ್ನು ಪ್ರಸ್ತುತಪಡಿಸಲು ಈ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಹಿಂತಿರುಗಿಸಲಾಗಿದೆ ಎಂದು ನ್ಯಾಯಾಲಯ ಸೂಚಿಸಿತು.

ಇದರ ಅರ್ಥ ಏನು?

ಈ ಪ್ರಕರಣವು ನಾಸಿಕ್ ಕೌಟುಂಬಿಕ ನ್ಯಾಯಾಲಯಕ್ಕೆ ಮರಳಿದ್ದು, ಪತ್ನಿಗೆ ತನ್ನ ವಾದಗಳನ್ನು ಮಂಡಿಸಲು ಅವಕಾಶ ನೀಡುತ್ತದೆ. ಆದಾಗ್ಯೂ, ಡಿಜಿಟಲ್​ ಸಂದೇಶಗಳನ್ನು ಪರಿಗಣಿಸಬಹುದು . ಆದರೆ, ನ್ಯಾಯಾಲಯ ಎರಡೂ ಕಡೆಯವರನ್ನು ಕೇಳದೆ ಅವುಗಳ ಆಧಾರದ ಮೇಲೆ ಮಾತ್ರ ವಿಚ್ಛೇದನವನ್ನು ನಿರ್ಧರಿಸಲು ಸಾಧ್ಯವಿಲ್ಲ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net