ಪೊಲೀಸರ ಪ್ರಕಾರ, ವಿಚಾರಣೆ ವೇಳೆ ಸಿಯಾ ಕೆಲವು ಮಾಹಿತಿಗಳನ್ನು ಮುಚ್ಚಿಡುತ್ತಿರುವುದು ಕಂಡುಬಂದಿತ್ತು. ಇದರಿಂದ ಆಕೆಯ ಮೊಬೈಲ್ ಕರೆ ವಿವರಗಳು, ಸಾಮಾಜಿಕ ಜಾಲತಾಣ ಚಟುವಟಿಕೆಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಯಿತು. ಈ ಪರಿಶೀಲನೆಯ ಬಳಿಕ ಪ್ರಕರಣದ ದಿಕ್ಕು ಬದಲಾಗಿದ್ದು, ಕೊಲೆ ಶಂಕೆ ಮತ್ತಷ್ಟು ಬಲವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.