ಸರ್ಕಾರದ ಧೋರಣೆ ಸರಿಯಿಲ್ಲ: ಜಾರ್ಖಂಡ್ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್; ಮಿತ್ರ ಪಕ್ಷದ ನಡೆಗೆ ರಾಹುಲ್ ಬೇಸರ! Rahul Gandhi on Jharkhand Protest
ಮಿತ್ರಪಕ್ಷದ ಕ್ರಮಕ್ಕೆ ರಾಹುಲ್ ಬೇಸರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಾರ್ಖಂಡ್ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್
ಮಿತ್ರಪಕ್ಷದ ಕ್ರಮಕ್ಕೆ ರಾಹುಲ್ ಬೇಸರ
ಮಾತುಕತೆ ಮೂಲಕ ಪರಿಹಾರಕ್ಕೆ ಬನ್ನಿ ಎಂದು ಸಲಹೆ
ನವದೆಹಲಿ: ರಾಜ್ಯದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಜಾರ್ಖಂಡ್ನಲ್ಲಿ ಕಳೆದ 17 ದಿನಗಳಿಂದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಪ್ರರಿಭಟನೆಯನ್ನು ನಡೆಸುತ್ತಿದ್ದಾರೆ.
ಇಂದು ಈ ಪ್ರತಿಭಟನೆ ತೀವ್ರಗೊಂಡಿದ್ದು, ವಿಧಾನಸಭೆ ಮುತ್ತಿಗೆಗೆ ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಅಶ್ರವಾಯು ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆ.
ಈಗ ಈ ಘಟನೆಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಲೋಕಸಭಾ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi on Jharkhand Protest), ಸರ್ಕಾರದ ಕ್ರಮವನ್ನು ಖಂಡಿಸಿ, ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಿ ಎಂದು ಜಾರ್ಖಂಡ್ ಸಿಎಂದ ಹೇಮಂತ್ ಸೊರೆನ್ ಅವರಲ್ಲಿ ಕೇಳಿಕೊಂಡಿದ್ದಾರೆ.
ಲಾಠಿ ಚಾರ್ಜ್ ಘಟನೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ, ವಿದ್ಯಾರ್ಥಿಗಳು ಯಾವ ಸಮಸ್ಯೆ ಬಗ್ಗೆ ದನಿ ಎತ್ತಿದ್ದಾರೆ? ಅವರ ಸಮಸ್ಯೆಗಳೇನು? ಎನ್ನುವುದನ್ನು ಮೊದಲು ತಿಳಿದುಕೊಳ್ಳಿ, ಸುಮ್ಮನೇ ಅವರ ಮೇಲೆ ದಂಡಾತ್ಮಕ ಕ್ರಮಕ್ಕೆ ಮುಂದಾಗಬೇಡಿ, ಮಾತುಕತೆ ಮೂಲಕ ಪರಿಹಾಕ ಕಂಡುಕೊಳ್ಳಿ ಎಂದು ತಮ್ಮದೇ ಘಟಬಂಧನ ಸರ್ಕಾರ್ ಮುಖ್ಯಮಂತ್ರಿಯಲ್ಲಿ ರಾಹುಲ್ ಮನವಿ ಮಾಡಿದ್ದಾರೆ.
ಮಾತುಕತೆ ನಡೆದರೆ ಸಿಎಂ ಜೊತೆ ಮಾತ್ರ!
ಇದೇ ವಿಷಯದ ಬಗ್ಗೆ ಮಾತನಾಡಿರುವ ಈ ಪ್ರತಿಭಟನೆ ನೇತಾರ ಹಾಗೂ ವಿದ್ಯಾರ್ಥಿ ನಾಯಕ ದೇವೇಂದ್ರ ಮಹ್ತೊ, ನಾವು ಇನ್ಮುಂದೆ ಸರ್ಕಾರದ ಯಾವುದೇ ನಿಯೋಗದ ಜೊತೆಗೆ ಮಾತುಕತೆ ನಡೆಸೊಲ್ಲ, ನಮ್ಮ ಮಾತು ಏನಿದ್ದರೂ ಅದು ಸಿಎಂ ಹೇಮಂತ್ ಸೊರೆನ್ ಜೊತೆ ಮಾತ್ರ ಎಂದಿದ್ದಾರೆ.
ನಮ್ಮ ಬೇಡಿಕೆಗಳಾಗಿರುವ ಜೆಪಿಎಸ್ಸಿ ಹಾಗೂ ಜೆಎಸ್ಎಸ್ಸಿ ನಿರ್ಮೂಲನೆ, ಮರು ಪರೀಕ್ಷೆ ಹಾಗೂ ಸಿಬಿಐ ತನಿಖೆಗೆ ಒಪ್ಪಿದರೆ ಮಾತ್ರ ಈ ಹೋರಾಟವನ್ನು ಹಿಂಪಡೆಯುತ್ತೇವೆ, ಇಲ್ಲದಿದ್ದರೆ ಈ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್).