33 ಅಡಿ ಎತ್ತರವಿರುವ ಈ ಏಕಶಿಲಾ ಶಿವಲಿಂಗವು ಬರೋಬ್ಬರಿ 210 ಟನ್ ತೂಕವಿದ್ದು, ಇದನ್ನು 2,500 ಕಿಲೋಮೀಟರ್ ದೂರದಿಂದ ವಿರಾಟ ಮಂದಿರಕ್ಕೆ ತರಲಾಯಿತು. ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರಕ್ಕೆ ಶಿವಲಿಂಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಆ್ಯಕ್ಸಲ್ ಟ್ರಕ್‌ನಲ್ಲಿ ಕರೆತರಲಾಯಿತು. 45 ದಿನಗಳು, 2,500 ಕಿ.ಮೀ. ಪ್ರಯಾಣದಲ್ಲಿ ಶಿವಲಿಂಗವು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮಾರ್ಗವಾಗಿ ಸಾಗಿ, ದೇಗುಲವನ್ನು ತಲುಪಿತು.