ಈ ರೈಲು 10 ಕೋಚ್‌ಗಳನ್ನು ಹೊಂದಿರಲಿದೆ. ಹೈಡ್ರೋಜನ್ ಇಂಧನ ಕೋಶ ವ್ಯವಸ್ಥೆ ಇದರಲಿದ್ದು, ಒಟ್ಟು ಶಕ್ತಿ 2400 ಕಿಲೋವ್ಯಾಟ್ ಎನ್ನಲಾಗಿದೆ. ನೀಲಿ ಬಣ್ಣದ ರೈಲಿನ ವಾಣಿಜ್ಯ ವೇಗ ಗಂಟೆಗೆ 75 ಕಿಲೋಮೀಟರ್. ಪ್ರಾಯೋಗಿಕ ಸಮಯದಲ್ಲಿ, ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸಿದೆ. ಒಂದು ಬಾರಿ ಹೈಡ್ರೋಜನ್ ತುಂಬಿಸಿದರೆ, ಸುಮಾರು 250 ಕಿಮೀ ಕ್ರಮಿಸಲಿದೆ. ಹೈಡ್ರೋಜನ್ ಸಿಲಿಂಡರ್‌ಗಳು, ಬ್ಯಾಟರಿಗಳು ಮತ್ತು ನಿಯಂತ್ರಣ ವ್ಯವಸ್ಥೆಗೆ ಪ್ರತ್ಯೇಕ ಹಾಗೂ ವಿಶೇಷ ಘಟಕಗಳಿವೆ.