ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ 'ಸಮಾನತಾ ಸಮಿತಿ'ಗಳನ್ನು ಸ್ಥಾಪಿಸುವುದನ್ನು ಯುಜಿಸಿ ಕಡ್ಡಾಯಗೊಳಿಸಿದೆ. ಆಯಾ ಸಮಿತಿಗಳಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ, ದಿವ್ಯಾಂಗ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಜಾತಿ, ಧರ್ಮ, ಲಿಂಗ, ಅಂಗವೈಕಲ್ಯ ಮತ್ತು ಜನಾಂಗೀಯತೆಯ ಆಧಾರದ ಮೇಲೆ ತಾರತಮ್ಯದ ದೂರುಗಳನ್ನು ಪರಿಹರಿಸಲು ಈ ವಿಶೇಷ ಕೋಶಗಳು ಕೆಲಸ ಮಾಡುತ್ತವೆ ಎಂದಿದೆ. ಯಾವುದೇ ತಾರತಮ್ಯದ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಸಮಿತಿ ಸಭೆ ಸೇರಬೇಕು. ಘಟನೆಯ ತನಿಖೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು 7 ದಿನಗಳಲ್ಲಿ (ಒಂದು ವಾರದೊಳಗೆ) ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ 24/7 ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದೆ. ಆದರೀದು, ಮೀಸಲಾತಿ ವರ್ಗದಡಿ ಸೇರದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಏಕೆ ಅನ್ವಯಿಸಲ್ಲ ಎಂಬ ಪ್ರಶ್ನೆ ಗಟ್ಟಿಯಾಗಿದೆ.